ಜಿಲ್ಲಾ ಉಸ್ತುವಾರಿ ಸ್ಥಾನ ಬೇಡ ಎನ್ನುವ ಸಚಿವರನ್ನು ಸಂಪುಟ ಸ್ಥಾನದಿಂದ ಕಿತ್ತು ಹಾಕಿ : ಈಶ್ವರಪ್ಪ..!

ಶಿವಮೊಗ್ಗ –  ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಡ ಎನ್ನುವವರನ್ನು ಸಚಿವ ಸಂಪುಟ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಶಾಸಕ ಈಶ್ವರಪ್ಪ  ಆಕ್ರೋಶ ವ್ಯಕ್ತಪಡಿಸಿದ್ದರು. ಹಲವಾರು ಸಚಿವರು ನನಗೆ ಆ ಜಿಲ್ಲೆ ಬೇಕು ಈ ಜಿಲ್ಲೆ ಬೇಕು, ನನಗೆ ಸಚಿವ ಸ್ಥಾನವೇ ಬೇಡ ಎಂಬ ಮಾತುಗಳು ಕೇಳಿಬರುತ್ತಿದ್ದು, ಇವರೆಲ್ಲರ ವಿರುದ್ಧ ಕೆ ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಡ ಎನ್ನುತ್ತಿರುವ ಸಚಿವ ಡಿ.ಸಿ.ತಮ್ಮಣ್ಣ ನವರು ಜಿಲ್ಲಾ ಉಸ್ತುವಾರಿಕೆಯನ್ನು ಬೇಡ ಎನ್ನುವುದು ಸರಿಯಲ್ಲ ಎಂದು ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ನಾನು ಡಿ. ಸಿ. ತಮ್ಮಣ್ಣನವರು ಬಹಳ ವರ್ಷಗಳಿಂದ ಒಳ್ಳೆಯ  ಸ್ನೇಹಿತರು, ಅವರನ್ನು ಬಿಜೆಪಿಗೆ ಬನ್ನಿ ಎಂದು ಕರೆದಿದ್ದೆ, ಅವರು ಒಪ್ಪಿಕೊಂಡಿದ್ರು, ಆದ್ರೆ ಕಾರಣಾಂತರಗಳಿಂದ ಅವರು ಜೆಡಿಎಸ್ ನಲ್ಲಿಯೇ ಉಳಿದುಕೊಂಡಿದ್ದಾರೆ.ಸಚಿವರಾದ್ರೆ ಅವರು ಒಂದು ಜಿಲ್ಲೆ, ತಾಲೂಕಿಗೆ ಮಂತ್ರಿಯಲ್ಲ ಬದಲಿಗೆ ರಾಜ್ಯಕ್ಕೆ ಮಂತ್ರಿಯಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವವರಾದ ಮೇಲೆ ಜವಾಬ‌್ದಾರಿ ತೆಗೆದುಕೊಳ್ಳಬೇಕು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಕುಮಾರಸ್ವಾಮಿರವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಡ ಎನ್ನುವವರನ್ನು ಮಂತ್ರಿ ಸ್ಥಾನದಿಂದ ತೆಗೆದು ಹಾಕಬೇಕು ಅಂತ ಒತ್ತಾಯಿಸುತ್ತೇನೆ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ  ಬೇಡ ಎನ್ನವವರ ಮೇಲೆ ಈಶ್ವರಪ್ಪ ಕಿಡಿಕಾರಿದ್ದಾರೆ.

ತಮ್ಮ ಇಲಾಖೆಯಲ್ಲೆ ಹೆಚ್ಚು ಕೆಲಸವಿದೆ ಎಂದು ಉಸ್ತುವಾರಿ ಬೇಡ ಎನ್ನುವುದು ಸರಿಯಲ್ಲ. ಆಗಸ್ಟ್ 15 ಕ್ಕೆ ಉಸ್ತುವಾರಿ ಸಚಿವರೆ ಧ್ವಜರೋಹಣ ಮಾಡಬೇಕೆ ಹೊರತು ವಿರೋಧ ಪಕ್ಷದವರು ಮಾಡಲು ಸಾಧ್ಯವಿಲ್ಲ. ನಾನು ಮಂತ್ರಿ ಆದಾಗ ಬಿಎಸ್ ವೈ ಬಿಜಾಪುರ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಿದ್ರು. ಆಗ ನಾನು ಬೇಡ ಎನ್ನದೆ ಅಲ್ಲಿ ಹೋಗಿ ಕೆಲಸ ಮಾಡಿದ್ದೆ ಎಂದು ತಿಳಿಸಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com