Cricket : ಇಂಗ್ಲೆಂಡ್ ತಂಡಕ್ಕೆ ರೂಟ್, ಬೇರ್‌ಸ್ಟೊ ಆಸರೆ : 4 ವಿಕೆಟ್ ಪಡೆದು ಮಿಂಚಿದ ಅಶ್ವಿನ್

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಬುಧವಾರ ಬರ್ಮಿಂಗ್ ಹ್ಯಾಮ್ ನಲ್ಲಿರುವ ಎಡ್ಜ್ ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ದುಕೊಂಡರು.

ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಅಶ್ವಿನ್ ಆಘಾತ ನೀಡಿದರು. ಅದ್ಭುತವಾಗಿ ತಿರುವು ಪಡೆದ ಅಶ್ವಿನ್ ಆಫ್ ಸ್ಪಿನ್ ಎಸೆತದಲ್ಲಿ ಅಲಿಸ್ಟರ್ ಕುಕ್ ಕ್ಲೀನ್ ಬೋಲ್ಡ್ ಆದರು.

Image result for R ashwin edgbaston 4 wicket England

ಇಂಗ್ಲೆಂಡ್ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಮೊದಲ ದಿನದಾಟ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 285 ರನ್ ಮೊತ್ತ ಕಲೆಹಾಕಿದೆ.  ಸಮಯೋಚಿತ ಆಟವಾಡಿದ ಜೋ ರೂಟ್ 80 ರನ್ ಗಳಿಸಿದ್ದಾಗ ರನ್ ಔಟ್ ಆದರು. ರೂಟ್ ರೊಂದಿಗೆ ಉತ್ತಮ ಜೊತೆಯಾಟವಾಡಿದ ಜಾನಿ ಬೇರ್ಸ್ಟೊ 70 ರನ್ ಗಳಿಸಿ ಉಮೇಶ ಯಾದವ್ ಎಸೆತದಲ್ಲಿ ಬೋಲ್ಡ್ ಆದರು.

ಸ್ಯಾಮ್ ಕರನ್ (24*) ಹಾಗೂ ಜೇಮ್ಸ್ ಆ್ಯಂಡರ್ಸನ್ ಕ್ರೀಸ್ ನಲ್ಲಿದ್ದಾರೆ. ಭಾರತದ ಪರವಾಗಿ ಮಿಂಚಿನ ದಾಳಿ ನಡೆಸಿದ ಆಫ್ ಸ್ಪಿನ್ನರ್ ಆರ್. ಅಶ್ವಿನ್ 4 ಹಾಗೂ ವೇಗಿ ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com