ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ರಾಜಕೀಯ ಪ್ರೇರಿತ : ಆನಂದ್ ಅಸ್ನೋಟಿಕರ್

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ರಾಜಕೀಯ ಪ್ರೇರಿತ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಆನಂದ್ ಅಸ್ನೋಟಿಕರ್ ಮುಂದಿನ ಲೋಕಸಭಾ ಚುನಾವಣೆಯನ್ನು ಇಟ್ಟುಕೊಂಡು ಬಿಜೆಪಿಗರು ಅನವಶ್ಯಕವಾಗಿ ಪ್ರತ್ಯೇಕ ರಾಜ್ಯ ವಿಚಾರವನ್ನ ಸೃಷ್ಟಿ ಮಾಡುತ್ತಿ ದ್ದಾರೆಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.ಅವರು ಒಂದು ಪ್ರದೇಶಕ್ಕೆ ಸೀಮಿತವಾದ ಸಿಎಂ ಅಲ್ಲ. ಅಖಂಡ ಕರ್ನಾಟಕಕ್ಕೆ ಸಿಎಂ ಆಗಿದ್ದಾರೆ. ರಾಜ್ಯದ ರೈತರ 40 ಸಾವಿರ ಕೋಟಿ ಸಾಲಮನ್ನಾ ಮಾಡಿದ ಗಂಡಸು ಕುಮಾರಸ್ವಾಮಿ ಮಾತ್ರ. ಅದು ಎಲ್ಲಾ ರೈತರಿಗೂ ಸಾಲಮನ್ನಾ ಮಾಡಿದ್ದು, ಅಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುವ ಬೇದವನ್ನ ಮಾಡಿಲ್ಲ.

ರೈತರು ಈ ಬಗ್ಗೆ ಗಮನಹರಿ ಸಬೇಕು. ಚುನಾವಣೆ ಮುನ್ನ ಕುಮಾರಸ್ವಾಮಿಯವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದು ಉತ್ತರ ಕರ್ನಾಟಕದ ಮೇಲಿರು ವ ಪ್ರೀತಿ ತೋರಿಸುತ್ತದೆ.ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನ ಬಿಟ್ಟು ಕುಮಾರ ಸ್ವಾಮಿಯವರಿಗೆ ಅಭಿವೃದ್ದಿ ವಿಚಾರದಲ್ಲಿ ಬೆಂಬಲವನ್ನು ಎಲ್ಲರೂ ನೀಡಲಿ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com