ಮೈಸೂರು : ಜಿಲ್ಲಾ ಉಸ್ತುವಾರಿಯಾಗಿ ಜಿಟಿಡಿ ನೇಮಕ : ಸಿದ್ದರಾಮಯ್ಯ ಅಸಮಾಧಾನ..?

ಮೈಸೂರು : ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಅಸಮಾಧಾನ ಭುಗಿಲೆದ್ದಿದೆ.  ಮೈಸೂರು ಜಿಲ್ಲಾ ಉಸ್ತುವಾರಿ ನೇಮಕ ವಿಚಾರದಲ್ಲಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸಚಿವರಿಗೆ ಉಸ್ತುವಾರಿ ಕೊಡುವಂತೆ ಮನವಿ ಮಾಡಿದ್ದರೂ ಕೂಡ ಜಿ.ಟಿ ದೇವೇಗೌಡರಿಗೆ ಉಸ್ತುವಾರಿ ನೀಡಿದಕ್ಕೆ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎನ್ನಲಾಗ್ತಿದೆ. ತಮ್ಮ ಆಪ್ತರಿಗೆ ಉಸ್ತುವಾರಿ ನೀಡುವಂತೆ ಸಿದ್ದರಾಮಯ್ಯ ಕೇಳಿದ್ದರು. ಆದ್ರೆ ಸಿದ್ದರಾಮಯ್ಯ ಮನವಿಗೆ ಸ್ಪಂದಿಸದೆ ಕುಮಾರಸ್ವಾಮಿ ಮೈಸೂರು ಉಸ್ತುವಾರಿಯನ್ನು ಜಿಟಿಡಿಗೆ ನೀಡಿದ್ದಾರೆ.  ಹೀಗಾಗಿ ಕರ್ನಾಟಕ ಕಾಂಗ್ರೆಸ್​​ ಉಸ್ತುವಾರಿ ವೇಣುಗೋಪಾಲ್ ಅವರ ಮುಂದೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದ್ದು.  ಇಂದು ಬೆಳಗ್ಗೆ ದೂರವಾಣಿ ಮೂಲಕ ವೇಣುಗೋಪಾಲ್​​​ ಮುಂದೆ ಸಿದ್ದರಾಮಯ್ಯ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದ್ದು.  ಮೈಸೂರು ಜಿಲ್ಲೆಯ ಹಿಡಿತ ಕೈತಪ್ಪಲಿದೆ ಎಂಬ ಚಿಂತೆ ಸಿದ್ದರಾಮಯ್ಯಗೆ ಇದೆ ಎನ್ನಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com