ಮಂಡ್ಯ ಜಿಲ್ಲೆಯಾದ್ಯಂತ ರಾಗಿ ಮುದ್ದೆ ತಿನ್ನುವ ಸ್ಪರ್ಧೆ : 4 ಕೆ.ಜಿ ಮುದ್ದೆ ತಿಂದ ಯುವಕ..!
ಮಂಡ್ಯ: ಜಿಲ್ಲೆಯಾದ್ಯಂತ ಮುದ್ದೆ ತಿನ್ನುವ ಸ್ಪರ್ಧೆಯದ್ದೇ ಕಾರುಬಾರು. ಗ್ರಾಮೀಣ ಕ್ರೀಡೆಯಾದ, ಅದರಲ್ಲೂ ನಾಟಿ ಕೋಳಿ ಸಾಂಬಾರು, ಮುದ್ದೆ ತಿನ್ನು ಸ್ಪರ್ಧೆ ಅಂದರೆ ಎಲ್ಲಿಲ್ಲದ ಕುತೂಹಲ. ಯಾರು ಹೆಚ್ಚಾಗಿ ಮುದ್ದೆ ತಿನ್ನಿತ್ತಾರೆ. ಯಾರು ಗಟ್ಟಿಯಾಳು ಎಂಬುದನ್ನು ಜನತೆ ಕುತೂಹಲದಿಂದ ನಿರೀಕ್ಷಿಸುತ್ತಿರುತ್ತಾರೆ. ಇಂತಹ ಬಹಳ ನಿರೀಕ್ಷೆಯ ಸ್ಪರ್ಧೆ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು.
ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂದಿನ ಮೈದಾನದಲ್ಲಿ ನಡೆಯಿತು . ಸ್ವರ್ಧೆಯಲ್ಲಿ 21 ಮಂದಿ ಸ್ವರ್ಧಾಳುಗಳು ಭಾಗವಹಿಸಿದ್ದರು.
ಅರ್ಧ ಕೆಜಿಯ ರಾಗಿಮುದ್ದೆಯುಳ್ಳ ಒಂದು ಮುದ್ದೆಯನ್ನು ನಾಟಿಕೋಳಿ ಸಾಂಬಾರು ನೀಡಲಾಯಿತು. ಚಿತ್ರದುರ್ಗದ ಸ್ವರ್ಧಾಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಸ್ಪರ್ಧೆಯಲ್ಲಿ ಚಿಕ್ಕಅರಸಿಕೆರೆ ಗ್ರಾಮದ ಸುರೇಶ್ ಎಂಬಾತ ಎಂಟು ಮುದ್ದೆ ತಿನ್ನುವ ಮೂಲಕ ( ನಾಲ್ಕು ಕೆಜಿ ಮುದ್ದೆ ತಿಂದು) ಪ್ರಥಮ ಬಹುಮಾನ 5000 ರೂ ಪಡೆದುಕೊಂಡರೆ ಇನ್ನೂ ಟಿ.ನರಸೀಪುರ ತಾಲ್ಲೂಕಿನ ಹುಣಸೂರು ಗ್ರಾಮದ ಶಂಕರ್ ರವರು ಏಳೂವರೆ ಮುದ್ದೆ ತಿಂದು ದ್ವಿತೀಯ ಬಹುಮಾನ 3000 ರೂ , ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದ ಶಿವು ಎಂಬುವರು ಏಳು ಮುದ್ದೆ ತಿಂದು 2000 ರೂ ನಗದು ಪಡೆದಕೊಂಡರು.