ಕುಮಾರಣ್ಣ 24 ಗಂಟೆ ಕೆಲಸ ಮಾಡ್ತಿದಾರೆ, ಅದರ ಬಗ್ಗೆ ಜಾಹೀರಾತು ಕೊಟ್ಟಿಲ್ಲ : ಎಚ್.ಡಿ ರೇವಣ್ಣ

ಸಚಿವ ಹೆಚ್.ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ. ‘ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಪ್ರಥಮ ದರ್ಜೆ ಕಾಲೇಜುಗಳಿರಲಿಲ್ಲ. ಅದನ್ನ ಮಾಡೋದಕ್ಕೆ ಕುಮಾರಸ್ವಾಮಿ ಬರಬೇಕಿತ್ತ..? ಇದ್ರಲ್ಲಿ ಯಾರ ಮಕ್ಕಳು‌ ಓದುತ್ತಾರೆ? ಇದ್ರಲ್ಲಿ‌ ಓದೋದು ಬಡವರ ಮಕ್ಕಳಲ್ಲವೆ.? ಕುಮಾರಣ್ಣ್ 24ಗಂಟೆ ಕೆಲಸ‌ಮಾಡ್ತಿದ್ದಾರೆ. ಕುಮಾರಸ್ವಾಮಿಯವರು ಇದರ ಬಗ್ಗೆ ಜಾಹಿರಾತು ಕೊಟ್ಟಿಲ್ಲ ‘ ಎಂದರು.

‘ ನಮಗೆ ಅಖಂಡ ಕರ್ನಾಟಕ ಒಂದಾಗಿ ಇರಬೇಕು. ಯಡಿಯೂರಪ್ಪ ಉತ್ತರ ಕರ್ನಾಟಕ ಕ್ಕೆ ಏನು‌ ಮಾಡಿದ್ದಾರೆ. ಬನ್ನಿ ನನ್ನ ಮುಂದೆ ಚರ್ಚೆಗೆ. ಅವರು ಅಧಿಕಾರದಲ್ಲಿದ್ದಾಗ ನಾವೇನು ಹಿಡಿದುಕೊಂಡಿದ್ದೀವಾ..? ‘ ಎಂದರು.

‘ ರಾಜ್ಯದಲ್ಲಿ ನೀರಾವರಿ ಕಾಮಗಾರಿಗಳಿಗೆ ದೇವೇಗೌಡರ ಕೊಡುಗೆ ಸಾಕಷ್ಟಿದೆ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಏನೇನು ಕೆಲಸಗಳಾಗಿವೆ ಎಂಬ ವಿಚಾರವನ್ನಿಟ್ಟುಕೊಂಡು, ದಿನ ಬೆಳಿಗ್ಗೆ ಮಾದ್ಯಮಗಳನ್ನು ಇಟ್ಟುಕೊಂಡು ಎಷ್ಟು ದಿನ ಈ ರೀತಿ ಮಾಡುತ್ತೀರ ‘ ಎಂದು ಯಡಿಯೂರಪ್ಪ ವಿರುದ್ದ ಆಕ್ರೋಷ ವ್ಯಕ್ತಪಡಿಸಿ ಶ್ರವಣಬೆಳಗೊಳದಲ್ಲಿ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

ಉಮೇಶ್ ಕತ್ತಿ ವಿರುದ್ದ ಆಕ್ರೋಶ ವ್ಯಪಡಿಸಿದ ರೇವಣ್ಣ ‘ ಅವರ ತಮ್ಮ ಅದ್ಯಕ್ಷರಾಗಿರುವ ಬೆಳಗಾಂ ಡಿ.ಸಿ.ಸಿ.ಬ್ಯಾಂಕಿನಲ್ಲಿ ಎಷ್ಟು ಸಾಲ‌ಮನ್ನಾ ಆಗಿದೆ. ಆ ಸಾಲ ಯಾರಿಗೆ ಕೊಟ್ಟಿದ್ದರು ಉಮೇಶ್ ಕತ್ತಿ ಹೇಳಲಿ. ರಾಜಕಾರಣ ಯಾವತ್ತು ಸುಳ್ಳಿನಿಂದ ಆಗಲ್ಲ. ಓಟಿಗಾಗಿ ಬಡವರನ್ನ ಯಾಕೆ‌ ಹಾಳು ಮಾಡುತ್ತಿರ. ನಾಚಿಕೆಯೇ ಇಲ್ಲ ‘ ಎಂದರು.

‘ ಮಹದಾಯಿ ವಿಚಾರವನ್ನು‌ಇಷ್ಟು ದಿನಗಳಿಂದ ಯಾಕೆ ಪರಿಹರಿಸಿಲ್ಲ ಎಂದು ಆಕ್ರೋಶ. 10 ವರ್ಷದಿಂದ ಹಾಸನಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ನಾವು ಹಾಸನದ ಅಭಿವೃದ್ಧಿ ಮಾಡಿದ್ರೆ ಅದು ಅಪ್ಪ ಮಕ್ಕಳ ಪ್ರಶ್ನೆ ಎನ್ನುತ್ತಾರೆ ‘ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com