ಚೆನ್ನೈ : ಆಸ್ಪತ್ರೆಗೆ ಭೇಟಿ ನೀಡಿ ಕರುಣಾನಿಧಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ..

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ತಮಿಳುನಾಡು ರಾಜಧಾನಿ ಚೆನ್ನೈಗೆ ತೆರಳಿದ್ದರು. ನಗರದ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ ಡಿಎಂಕೆ ಹಿರಿಯ ಮುಖಂಡ ಕರುಣಾ ನಿಧಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಡಿಎಂಕೆ ಪಕ್ಷದ ಮುಖಂಡರಾದ ಎಂ.ಕೆ ಸ್ಟ್ಯಾಲಿನ್ ಹಾಗೂ ಕನಿಮೋಝಿ ಅವರನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ.

ಭೇಟಿಯ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ‘ ಕರುಣಾನಿಧಿ ಅವರನ್ನು ನೋಡಲು ಬರಬೇಕೆಂದುಕೊಂಡಿದ್ದೆ, ಅವರ – ನಮ್ಮ ನಡುವೆ ದೀರ್ಘ ಸಂಬಂಧವಿದೆ. ಅವರು ನಿಧಾನವಾಗಿ ಚೇತರಿಸಿಕೊಳ್ಳತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎನಿಸುತ್ತಿದೆ. ತಮಿಳುನಾಡಿನ ಜನರಂತೆ ಕರುಣಾನಿಧಿ ತುಂಬ ಗಟ್ಟಿಯಾಗಿದ್ದಾರೆ. ತಮಿಳುನಾಡಿನ ಸ್ಫೂರ್ತಿ ಅವರಲ್ಲಿದೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com