Cricket : ಭಾರತ – ಇಂಗ್ಲೆಂಡ್ ಟೆಸ್ಟ್ ಸರಣಿ : ಇಂದಿನಿಂದ ಎಡ್ಜ್ ಬಾಸ್ಟನ್ ನಲ್ಲಿ ಮೊದಲ ಪಂದ್ಯ

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಬುಧವಾರದಿಂದ ಬರ್ಮಿಂಗ್ ಹ್ಯಾಮ್ ನಲ್ಲಿರುವ ಎಡ್ಜ್ ಬಾಸ್ಟನ್ ಮೈದಾನದಲ್ಲಿ ಮೊದಲ ಪಂದ್ಯ ಶುರುವಾಗಲಿದೆ. ಜೋ ರೂಟ್ ಹಾಗೂ ಕೊಹ್ಲಿ ಪಡೆಗಳು ಮೊದಲ ಪಂದ್ಯವನ್ನು ಜಯಿಸಿ ಶುಭಾರಂಭ ಮಾಡುವ ತವಕದಲ್ಲಿವೆ.

ಟಿ-20 ಸರಣಿಯಲ್ಲಿ ಭಾರತ 2-1 ರಿಂದ ಮೇಲುಗೈ ಸಾಧಿಸಿದರೆ, ಏಕದಿನ ಸರಣಿಯನ್ನು ಆತಿಥೇಯ ಇಂಗ್ಲೆಂಡ್ 2-1 ಅಂತರದಿಂದ ಜಯಿಸಿತ್ತು. ಇದೀಗ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳ ನಡುವೆ ರೋಚಕ ಹಣಾಹಣಿಗಾಗಿ ಕ್ರಿಕೆಟ್ ಅಭಿಮಾನಿಗಳ ಕಾತರರಾಗಿದ್ದಾರೆ. ಟೆಸ್ಟ್ ರ್ಯಾಂಕಿಗ್ ನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಇಂಗ್ಲೆಂಡ್ 5ನೇ ಸ್ಥಾನದಲ್ಲಿದೆ.

ಪಂದ್ಯದ ಮುನ್ನಾ ದಿನ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ‘ ಇಂಗ್ಲೆಂಡ್ ನ ಪರಿಸ್ಥಿತಿಯಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ನಮ್ಮ ಬೌಲರ್ಗಳು ತಮ್ಮ ಅನುವದಿಂದ ಚೆನ್ನಾಗಿ ಅರಿತಿದ್ದಾರೆ. ನಮ್ಮ ತಂಡದ ಬೌಲಿಂಗ್ ವಿಭಾಗದ ಬಗ್ಗೆ ನಮಗೆ ವಿಶ್ವಾಸವಿದೆ ‘ ಎಂದು ಹೇಳಿದ್ದಾರೆ.

2007 ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ತೆರಳಿದ್ದ ಟೀಮ್ ಇಂಡಿಯಾ 1-0 ಯಿಂದ ಸರಣಿ ಗೆದ್ದು ಬೀಗಿತ್ತು. 2011 ರಲ್ಲಿ ಇಂಗ್ಲೆಂಡ್ ಭಾರತವನ್ನು ಮಣಿಸಿ 5-0 ಯಿಂದ ಸರಣಿ ವೈಟ್ ವಾಷ್ ಮಾಡಿತ್ತು. ಬಳಿಕ 2014 ರಲ್ಲಿ ಆತಿಥೇಯ ಇಂಗ್ಲೆಂಡ್ 3-1 ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.

ಭಾರತೀಯ ಕಾಲಮಾನದದಂತೆ ಬುಧವಾರ ಮಧ್ಯಾಹ್ನ 3.30 ಕ್ಕೆ ಪಂದ್ಯ ಪ್ರಾರಂಭವಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com