ಹುಬ್ಬಳ್ಳಿ : ಗೌರಿ ಹತ್ಯೆ ಪ್ರಕರಣ : ಬಂಧಿತ ಆರೋಪಿಗಳ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಂಧಿಸಿದ್ದ  ಆರೋಪಿ ಅಮಿತ್ ಬದ್ದಿ ,ಗಣೇಶ್ ಮಿಸ್ಕಿನ್ ಬಿಡುಗಡೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಎಸ್.ಎಸ್.ಕೆ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ಜಸ್ಟಿನ್ ಫಾರ್ ಅಮಿತ್ ಬದ್ದಿ ಗಣೇಶ್ ಮಿಸ್ಕಿನ್ ಹೆಸರಲ್ಲಿ ನಡೆಯುತ್ತಿರುವ ಅಭಿಯಾನ  ಇದ್ದಾಗಿದ್ದು. ಸಾವಿರಾರು ಜನರು ಮೌನ ಪ್ರತಿಭಟನೆ ನಡೆಸುತ್ತಿದ್ದು, ಮಹಿಳೆಯರು, ಮಕ್ಕಳ ಸಮಾಜದ ಹಿರಿಯರು‌ ಭಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಅಮಾಯಕ ಯುವಕರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ರೋಶಿಸಿ ಕೈನಲ್ಲಿ ಫಲಕಗಳನ್ನು ಹಿಡಿದು ಹುಬ್ಬಳ್ಳಿಯ ತುಳಜಾಭವಾನಿ ದೇವಸ್ಥಾನ ದಿಂದ ತಹಶಿಲ್ದಾರರ ಕಚೇರಿ ವರೆಗೆ ಮೌನ ಪ್ರತಿಭಟನೆ ನಡೆಸಿದ್ದು   ಅಮಿತ್ ಹಾಗೂ ಗಣೇಶ್ ಕುಟುಂಬದ ಸದಸ್ಯರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.  ಅಮಿತ್ ಬದ್ದಿ ತಾಯಿ ಜಯಶ್ರೀ ಬದ್ದಿ,ಪತ್ನಿ ಅಂಜಲಿ ಬದ್ದಿ. ಹಾಗೂ ಗಣೇಶ್ ಮಿಸ್ಕಿನ್ ತಾಯಿ ಪುಷ್ಪಾ ಮಿಸ್ಕಿನ್ ಬಾಗಿಯಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com