ಹಾವೇರಿ ಬದಲು ಕೊಪ್ಪಳ ಜಿಲ್ಲಾ ಉಸ್ತುವಾರಿ ವಹಿಸಿದಕ್ಕೆ ಅಸಮಾಧಾನಗೊಂಡ ಆರ್.ಶಂಕರ್

ನಾನು ಹಾವೇರಿ ಜಿಲ್ಲೆಯವನು. ಹೀಗಾಗಿ ಹಾವೇರಿ ಜಿಲ್ಲೆಯ ಉಸ್ತುವಾರಿ ಸಿಗುತ್ತೆ ಎಂಬ ನಿರೀಕ್ಷೆ ಇತ್ತು. ಆದ್ರೆ ಇದೀಗ ನನಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದಾರೆ ಎಂದು ಅರಣ್ಯ ಸಚಿವ ಆರ್.ಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಾವೇರಿ ಬದಲಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ವಹಿಸಿದಕ್ಕೆ ಅಸಮಾಧಾನಗೊಂಡಿರುವ ಅವರು, ಹಾವೇರಿಯ ಜನರು ಮತ್ತು ಬೆಂಬಲಿಗರು ದೂರವಾಣಿ ಕರೆ ಮಾಡ್ತಿದ್ದಾರೆ. ಯಾಕೆ ಕೊಪ್ಪಳಕ್ಕೆ ಹೋಗ್ತಿದ್ದೀರಿ?  ಹಾವೇರಿಯಲ್ಲೇ ಕೆಲಸ ಮಾಡಿ ಎಂದು ಹೇಳ್ತಿದ್ದಾರೆ. ಜನರ ಮಾತನ್ನೂ ಕೇಳಬೇಕಲ್ವಾ? ಅದು ಬಿಟ್ಟು ದಿಢೀರನೆ ಉಸ್ತುವಾರಿ ನೇಮಕ ಮಾಡಲಾಗಿದೆ. ಆದ್ರೂ ಯಾವುದೇ ಜಿಲ್ಲೆ ಉಸ್ತುವಾರಿ ಕೊಟ್ರೂ ಕೆಲಸ ಮಾಡಲೇಬೇಕಾಗಿರುವುದರಿಂದ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com