ಬಾಲಿವುಡ್ ದುರಂತ ನಟಿ ಮೀನಾ ಕುಮಾರಿಗೆ ಗೂಗಲ್ ಡೂಡಲ್​ನಲ್ಲಿ ಗೌರವ…!

ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಬಾಲಿವುಡ್ ಅನ್ನು ರಾಣಿಯಂತೆ ಮೆರೆದು ದುರಂತ ಅಂತ್ಯ ಕಂಡ ಹಲವಾರು ನಟಿಯರ ಪೈಕಿ ಮೀನಾಕುಮಾರಿ ಕೂಡ ಒಬ್ಬರು. ಇಂದು ಅವರ ಹುಟ್ಟುಹಬ್ಬ , ಸ್ಮರಣಾರ್ಥ ಇಂದು ಸರ್ಚ್​ ಎಂಜಿನ್ ಗೂಗಲ್​ ಡೂಡಲ್​ನಲ್ಲಿ ಮೀನಾ ಅವರ ಫೋಟೋ ಪ್ರಕಟಿಸುವ ಮೂಲಕ ಗೂಗಲ್​ ಗೌರವ ನೀಡಿದೆ.

ಮೀನಾ ಕುಮಾರಿ ಎಂದಾಕ್ಷಣ ಸಿನಿ ಪ್ರೇಕ್ಷಕನ ಮನಸ್ಸು 1940ಕ್ಕೆ ರೈಲಿನಂತೆ ಓಡಿ ಥಟ್ ಅಂಥ ನಿಂತು ಬಿಡುತ್ತದೆ. ಮೀನಾ ಒಂದನೊಂದು ಕಾಲದ  ಲೀಡ್ ನಾಯಕಿ. ಪುಟ್ಟ ಅವಧಿಯಲ್ಲಿ ಬಾಲಿವುಡ್‌ನಲ್ಲಿ ಮಹಾರಾಣಿಯಂತೆ ಮೆರೆದರು ಮೀನಾ. ಆದರೆ ಬದುಕಿನ ಚಕ್ರದಲ್ಲಿ ಮೀನಾರ ಬದುಕು ಎಲ್ಲಿತ್ತೋ ಅಲ್ಲಿಯೇ ಬಂದು ನಿಂತು ಹೋಗಿರೋದಕ್ಕೆ ಮೀನಾರನ್ನು ಬಾಲಿವುಡ್ ನ ದುರಂತ ರಾಣಿಯನ್ನುತ್ತಾರೆ.

ತೆರೆಯ ಮೇಲೆ ಬಣ್ಣ ಬಣ್ಣದಿಂದ ಕೂಡಿದ್ದ ಇವರ ಜೀವನ ರಿಯಲ್​ ಲೈಫ್​ನಲ್ಲಿ ಅಕ್ಷರಶಃ ನರಕದಂತಿತ್ತು. ಆಗಸ್ಟ್​ 1,1993 ರಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಮೀನಾ, ತಮ್ಮ ನಾಲ್ಕನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ.  ಸೌಂದರ್ಯ ದೇವತೆಯಂತಿದ್ದ ಮೀನಾ ಬಹುಬೇಗನೆ ಚಿತ್ರರಂಗದಲ್ಲಿ ಹೆಸರು ಮಾಡುತ್ತಾರೆ. ಕೇವಲ 33 ವರ್ಷಗಳಲ್ಲಿ ಸುಮಾರು 92 ಚಿತ್ರಗಳಲ್ಲಿ ನಟಿಸುವ ಮೂಲಕ ಲೆಜೆಂಡ್​ ನಟಿಯಾಗಿ ಬಾಲಿವುಡ್ ನಲ್ಲಿ ರಾಣಿಯಂತೆ ಮೆರೆಯುತ್ತಾಳೆ.

ಲೆಜೆಂಡ್​ ನಟಿಯಂತೆ ಬದುಕಿದ್ದ ಮೀನಾ ಕುಮಾರಿ ಅವರ ನಿಜ ಜೀವನ ಕತ್ತಲೆಯಿಂದ ಕೂಡಿತ್ತು. ಮೀನಾ, 1952ರಲ್ಲಿ ನಿರ್ದೇಶಕ ಕಮಲ್ ಅಮ್ರೋಹಿಯನ್ನು ಪ್ರೀತಿಸಿ ಗುಟ್ಟಾಗಿ ವಿವಾಹವಾಗಿದ್ದರು. ಕಮಲ್​ಗೆ ಅದಾಗಲೇ ಮದುವೆಯಾಗಿ ಎರಡು ಮಕ್ಕಳು ಕೂಡ ಇದ್ದರು. ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ 1964ರಲ್ಲಿ ವಿಚ್ಛೇದನದಲ್ಲಿ ಅಂತ್ಯಗೊಂಡಿತ್ತು. ಅಂದಿನಿಂದ ಕುಡಿತದ ದಾಸಳಾದ  ಮೀನಾ, ನಿತ್ಯ ಮದ್ಯಪಾನದ ಅಮಲಿನಲ್ಲಿಯೇ ಜೀವನ ಸಾಗಿಸುತ್ತಾರೆ.

ಮೀನಾ ವಿಪರೀತ ಕುಡಿತದಿಂದ ಕರುಳು ಕೆಟ್ಟು ಹೋಗುತ್ತಿತ್ತು. 1968ರಲ್ಲಿ ಕುರುಳಿನ ಚಿಕಿತ್ಸೆಗಾಗಿ ಲಂಡನ್, ಸ್ವಿಟ್ಜರ್‌ಲ್ಯಾಂಡ್‌ಗೆ ಹೋದರು. ಚಿಕಿತ್ಸೆ ಫಲ ನೀಡಲಿಲ್ಲ. ಮರಳಿ ಭಾರತಕ್ಕೆ ಬಂದು ತನ್ನ ಹಿರಿಯಕ್ಕ ಮಧು ಅವರ ಮನೆಯಲ್ಲಿ ನೆಲೆ ನಿಂತರು. ಕೊನೆಗೆ ಮೀನಾ ಮಾ. 30, 1972 ರಲ್ಲಿ ಇಹಲೋಕದ ಪಯಣ ಅಂತ್ಯಗೊಳಿಸುತ್ತಾರೆ.

ಹೀಗೆ ಮೀನಾ ಅವರ ಜೀವನ ಒಂದು ಚಲನಚಿತ್ರದಂತಿತ್ತು. ಅವರ ಜೀವನದಲ್ಲಾದ ಏರುಪೇರುಗಳಿಂದಾಗಿ ಅವರ ಬಾಳು ಅಧೋಗತಿಗೆ ತಲುಪಿತ್ತು. ಕೊನೆಯಲ್ಲಿ ದುರಂತ ಅಂತ್ಯ ಕಂಡಿತು. ಅಷ್ಟೆಲ್ಲ ಹೆಸರು ಮಾಡಿದ ನಟಿಯನ್ನು ದುರಂತ ರಾಣಿಯಂತಲೇ ಇಂದಿಗೂ ಕರೆಯುತ್ತಾರೆ.

 

Leave a Reply

Your email address will not be published.

Social Media Auto Publish Powered By : XYZScripts.com