ಪತ್ನಿಯ ಪ್ರಿಯತಮನಿಂದ ಮಾಜಿ ಗಂಡನಿಗೆ ಚೂರಿ ಇರಿತ : ಗಾಯಗೊಂಡ ಪತಿ ಆಸ್ಪತ್ರೆಗೆ ದಾಖಲು..

ಮಾಜಿ ಗಂಡನಿಗೆ ಪತ್ನಿಯ ಪ್ರಿಯತಮನಿಂದ ಚೂರಿ ಇರಿದಿರುವ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ. ಮಾಜಿಗಂಡ ಸೇರಿದಂತೆ ಮೂವರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಾಜಿ ಗಂಡ ಅಮ್ಜದ್ ಪಾಷ (45), ಖೈಸರ್ (೩೦)ಹಾಗೂ ಖಿಸರ್ (೨೫) ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮ್ಜದ್ ಪಾಷಾನ ಮಾಜಿ ಪತ್ನಿ ನಿಶಾದ್ ಳ ಪ್ರಿಯತಮ ರೋಶನ್ ಎಂಬಾತ ಕೃತ್ಯ ಎಸಗಿದ್ದಾನೆ. ಅಮ್ಜದ್ ಪಾಷ ಹಾಗೂ ನಿಶಾದ್ 16 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತ್ನಿಯ ನಡುವಳಿಕೆಯಿಂದ ಬೇಸತ್ತ ಅಮ್ಜದ್ ಪಾಷ ಎರಡು ವರ್ಷಗಳ ಹಿಂದೆ ತಲಾಖ್ ಪಡೆದಿದ್ದ.

ಅಮ್ಜದ್ ಪಾಷ ಹಾಗೂ ನಿಶಾದ್ ಗೆ ಮೂರು ಮಕ್ಕಳಿದ್ದರು. ಮೂವರಲ್ಲಿ ಇಬ್ಬರು ಹೆಣ್ಣುಮಕ್ಕಳು ಇದ್ದರು. ಹೆಣ್ಣುಮಕ್ಕಳನ್ನ ತನ್ನ ವಶಕ್ಕೆ ನೀಡುವಂತೆ ಅಮ್ಜದ್ ಪಾಷ ಒತ್ತಾಯ ಮಾಡಿದ್ದ. ಅಮ್ಜದ್ ಪಾಷ ಮನವಿಯನ್ನ ನಿಶಾದ್ ತಿರಸ್ಕರಿಸಿದ್ಲು.

ಇತ್ತೀಚೆಗೆ ತನಗಿಂತ ಹತ್ತುವರ್ಷ ಚಿಕ್ಕವನಾದ ರೋಶನ್(೨೫) ಜೊತೆ ನಿಶಾದ್ ಸಂಭಂಧ ಇಟ್ಟುಕೊಂಡಿದ್ದಳು. ರೋಶನ್ ಪ್ರವೇಶದಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವೆಂದು ತನ್ನ ವಶಕ್ಕೆ ನೀಡುವಂತೆ ಅಮ್ಜದ್ ಪಾಶಾ ಪಟ್ಟು ಹಿಡಿದಿದ್ದ. ಇದೇ ವಿಚಾರದಲ್ಲಿ ರಾಜೀವ್ ನಗರದ ಮನೆ ಮುಂದೆ ನಿಲ್ಲಿಸಿದ್ದ ಅಮ್ಜದ್ ಪಾಷ ಕಾರನ್ನ ರೋಷನ್ ಜಖಂ ಗೊಳಿಸಿದ್ದ.

ನಂತರ ಮೊಬೈಲ್ ನಲ್ಲಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದ. ಹೆಣ್ಣುಮಕ್ಕಳನ್ನ ತನ್ನ ವಶಕ್ಕೆ ಪಡೆಯಬೇಕೆಂದು ರಾಜೀವ್ ನಗರದ ರೋಷನ್ ಮನೆಗೆ ಸುಹೇಲ್, ಖೈಸರ್ ಹಾಗೂ ಖಿಸರ್ ಜೊತೆ ಅಮ್ಜದ್ ಪಾಶಾ ಹೋಗಿದ್ದ. ಮನೆ ಬಳಿ ಅಮ್ಜದ್ ಹಾಗೂ ಸಂಗಡಿಗರು ಬಂದಾಗ ರೋಷನ್ ತಾಯಿ ಕಣ್ಣಿಗೆ ಖಾರದ ಪುಡಿ ಎರಚಿದ್ದಾಳೆ.

ಇದೇ ವೇಳೆ ರೋಷನ್ ಚೂರಿಯಿಂದ ಇರಿದಿದ್ದಾನೆ. ಸುಹೇಲ್ ಬಚಾವ್ ಆದರೆ ಅಮ್ಜದ್ ಪಾಷ, ಖಿಸರ್ ಹಾಗೂ ಖೈಸರ್ ಗೆ ಗಾಯಗಳಾಗಿವೆ. ನಾರಾಯಣ ಹೃದಯಾಲಯದಲ್ಲಿ ಅಮ್ಜದ್ ಪಾಷಾ ಗೆ ಚಿಕಿತ್ಸೆ ನಡೆಯುತ್ತಿದ್ದು, ಅಮ್ಜದ್ ಪಾಷಾ ಸ್ಥಿತಿ ಗಂಭೀರವಾಗಿದೆ. ಚೂರಿಯಿಂದ ಇರಿದ ರೋಷನ್ ನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com