ಹಣ ವಂಚನೆ ಆರೋಪ : ಕಿಚ್ಚ ಸುದೀಪ ವಿರುದ್ಧ ಎಸ್ಟೇಟ್ ಮಾಲೀಕನಿಂದ ದೂರು…!

ಬೆಂಗಳೂರು : ಅಭಿನಯ ಚಕ್ರವರ್ತಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ವಿರುದ್ದ ಧಾರವಾಹಿಯ ಚಿತ್ರೀಕರಣಕ್ಕೆ ಮನೆ  ಬಳಕೆ ಮಾಡಿಕೊಂಡು ಬಾಡಿಗೆ ಕೊಡದೆ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ.

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ  ವಾರಸ್ದಾರ ಧಾರವಾಹಿಗ  ನಟ ಸುದೀಪ್ ನಿರ್ಮಾಣ ಮಾಡುತ್ತಿದ್ದು,  ಧಾರವಾಹಿಯ ಶೂಟಿಂಗ್ ಗಾಗಿ  ಚಿಕ್ಕಮಗಳೂರಿನ ಕಾಫಿ ಎಸ್ಟೆಟ್ ಬಾಡಿಗೆ ಪಡೆದಿದ್ದ ಸುದೀಪ್ ಬಗೆ ಬಗೆಯ ಗಿಡ ಕಡಿದು ಗೆಸ್ಟ್ ಹೌಸ್ ನಿರ್ಮಾಣ ಮಾಡಿದ್ದರು. ಅರ್ಧದಲ್ಲೇ ಶೂಟಿಂಗ್ ಪ್ಯಾಕಪ್ ಮಾಡಿದ್ದ ತಂಡ, ಎಸ್ಟೇಟ್ ವೊಂದರ ಮಾಲೀಕ ದೀಪಕ್  ಧಾರವಾಹಿ ತಂಡ ನಮಗೆ ಬಾಡಿಗೆ ಕೊಡದೇ ಹೊಗಿದ್ದೇ ಎಂದು ದೂರು ದಾಖಲಿಸಿದ್ದಾರೆ.

ಎಸ್ಟೇಟ್  ಮಾಲೀಕ ದೀಪಕ್ ಎಂಬುವವರು ನಟ ಕಿಚ್ಚ ಸುದೀಪ್ ವಿರುದ್ದ ಫಿಲ್ಂ ಚೇಂಬರ್ ಗೆ ದೂರು ನೀಡಿದ್ದಾರೆ. ವಾರಸ್ದಾರ’ ಧಾರವಾಹಿ ಚಿತ್ರೀಕರಣಕ್ಕೆ ಮನೆ, ಜಮೀನು ಬಳಕೆ ಮಾಡಿಕೊಂಡು ಬಾಡಿಗೆ ನೀಡದೇ ಸುದೀಪ್ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು ಮಾಲೀಕ ದೀಪಕ್ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. ಚಿತ್ರತಂಡದಿಂದ ಮಾಲೀಕರಿಗೆ ಸುಮಾರು 90 ಲಕ್ಷ ಮೌಲ್ಯದ ನಷ್ಟವಾಗಿದೆ ಎಂದು ಹೇಳಲಾಗಿದೆ. ಹಣಕ್ಕಾಗಿ ಪ್ರತಿದಿನವೂ ಮಾಲೀಕ ದೀಪಕ್ ಮಯೂರ್ ಅಲೆಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com