ಸಚಿವರಿಗಾಗಿ ಜೌತಣಕೂಟ ಏರ್ಪಡಿಸಿದ ಸಿದ್ದರಾಮಯ್ಯ : ಹಲವು ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ..

ಸಿಎಂ ಆಗಿದ್ದಾಗಿನ ತಮ್ಮ ನಿವಾಸ ಕಾವೇರಿಯಲ್ಲಿ ಭೋಜನ ಕೂಟ ಆಯೋಜಿಸಿದ್ದು, ಇಂದು ಸಂಜೆ ಕಾಂಗ್ರೆಸ್​ನ ಎಲ್ಲಾ ಸಚಿವರನ್ನೂ ಆಹ್ವಾನಿಸಿದ್ದಾರೆ. ಸಿಎಂ ಆಗಿ ಐದು ವರ್ಷ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೀಗ ಈ ಮನೆಯನ್ನು ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸರ್ಕಾರ ನೀಡಿದೆ. ಇದರಿಂದ ಸಿದ್ದರಾಮಯ್ಯ ಕಾವೇರಿಯನ್ನು ತೊರೆಯುವುದು ಅನಿವಾರ್ಯವಾಗಿದ್ದು. ಈ ನಿಟ್ಟಿನಲ್ಲಿ ಇಷ್ಟು ದಿನ ವಾಸವಾಗಿದ್ದ ಈ ನಿವಾಸದಲ್ಲಿ ಅವರು ಭೋಜನ ಕೂಟ ಆಯೋಜಿಸಿದ್ದಾರೆ ಎನ್ನಲಾಗಿದೆ. ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರಿಗೆ ಅದೃಷ್ಟದ ಮನೆಯಾಗಿ ಕಾವೇರಿ ಲಭಿಸಿತ್ತು.

ಸಭೆಯಲ್ಲಿ ಯಾವುದೇ ವಿಚಾರ ಚರ್ಚೆಯಾಗುವುದಿಲ್ಲ. ಇದು ಸೌಹಾರ್ದ ಔತಣ ಕೂಟ ಎಂದು ಹೇಳಲಾಗಿದೆ. ಆದರೂ ಇಂದಿನ ಭೋಜನ ಕೂಟ ಸಂದರ್ಭ ಪ್ರತ್ಯೇಕ ರಾಜ್ಯ ಕೂಗಿನ ವಿಚಾರ, ಹೋರಾಟ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಅಸಮಾಧಾನ, ಕಾಂಗ್ರೆಸ್ ಪಕ್ಷದ ಸ್ಥಿತಿಗತಿಯ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಏಕಪಕ್ಷೀಯ ನಿರ್ಧಾರ, ಹೇಳಿಕೆಗಳಿಂದ ಕಾಂಗ್ರೆಸ್ ಮೇಲೆ ಆಗುವ ಪರಿಣಾಮದ ಬಗ್ಗೆ ಕೂಡ ಚರ್ಚೆ ಆಗಲಿದೆ.

Leave a Reply

Your email address will not be published.