ಅಶ್ಲೀಲ ವಿಡಿಯೋ ಚಿತ್ರಿಕರಿಸಿ ಬೆದರಿಕೆ : ಸ್ಯಾಂಡಲ್​ವುಡ್ ಖಳನಟನ ವಿರುದ್ಧ ಸಂತ್ರಸ್ತೆ ದೂರು…!

35 ವರ್ಷದ ಮಹಿಳೆ ಜೂನ್ 6 ರಂದು ಈ ದೂರು ನೀಡಿದ್ದು, ಐಪಿಸಿ ಸೆಕ್ಷನ್ 506 ಮತ್ತು 484 ರ ಅಡಿಯಲ್ಲಿ ಧರ್ಮ ಮತ್ತು ಅವರ ಕಾರು ಚಾಲಕ ನವೀನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಚಿತ್ರೀಕರಣ ಇದೆ ಎಂದು ಮಹಿಳೆಯೊಬ್ಬರನ್ನು ಕರೆಸಿಕೊಂಡು ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಹಾಕಿ ಅಶ್ಲೀಲ ವಿಡಿಯೋ ಮಾಡಿದ್ದಾರೆ ಎಂಬ ಆರೋಪ ಸ್ಯಾಂಡಲ್​ವುಡ್ ನಟನ ವಿರುದ್ಧ ಕೇಳಿಬಂದಿದೆ.ಅಲ್ಲದೆ ಅಶ್ಲೀಲ ವಿಡಿಯೋವನ್ನು ಮಹಿಳೆಯ ಮನೆಯವರಿಗೆ ಕಳಿಸಿ ಬೆದರಿಕೆ ಹಾಕಿ 14 ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಕೂಡ ಇದ್ದು,  ಸ್ಯಾಂಡಲ್​ವುಡ್ ಖಳ ನಟ ಧರ್ಮ ವಿರುದ್ಧ ಈ ಆರೋಪ ಕೇಳಿಬಂದಿದ್ದು ಈ ಘಟನೆ ಸಂಬಂಧ ಪಟ್ಟಂತೆ ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದು ಮಹಿಳೆ  ಖಳನಟ ಧರ್ಮ ವಿರುದ್ಧ ನೀಡಿರುವ ದೂರಿನ ಪ್ರತಿಯಾಗಿದ್ದು, ಜೂನ್ 6 ರಂದೇ ದೂರು ನೀಡಿದ್ದರೂ ಪೊಲೀಸರು ನಟ ಧರ್ಮ ಮತ್ತು ಆತನ ಚಾಲಕ ನವೀನ್​ನನ್ನು ಇದುವರೆಗೂ ಬಂಧಿಸಿಲ್ಲ,  ದೂರು ನೀಡಿದ್ದರು ಪೊಲೀಸರು ಇನ್ನು ಧರ್ಮನನ್ನು ಬಂಧಿಸಿಲ್ಲ ಅವರು ತಲೆಮರೆಸಿಕೊಂಡಿದ್ದಾರೆ ಸಬೂಬು ಹೇಳುತ್ತಿದ್ದಾರೆ ಎಂದು  ಮಹಿಳೆ ತಿಳಿಸಿದ್ದಾಳೆ.

ವಿಡಿಯೋ ಬಹಿರಂಗವಾಗುವುದು ಬೇಡ ಅನ್ನೋದಾದರೆ ಹಣ ಕೊಡಬೇಕು ಎಂದು ಇದುವರೆಗೆ 14 ಲಕ್ಷ ಹಣ ವಸೂಲಿ ಮಾಡಿ ಮತ್ತೂ ಹಣ ಬೇಕು ಎಂದು ಒತ್ತಾಯ ಮಾಡಿದರೆಂಬ ಆರೋಪ ಧರ್ಮ ವಿರುದ್ಧ ಕೇಳಿ ಬಂದಿದೆ. ಈ ಬಗ್ಗೆ ಮಹಿಳೆ ತನ್ನ ಗಂಡನಿಗೆ ನಡೆದ ಎಲ್ಲ ವಿಷಯ ತಿಳಿಸಿ ಈಗ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com