ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಜೋರಾಗಲು ಕುಮಾರಸ್ವಾಮಿಯೇ ಕಾರಣ : ಸಿ.ಟಿ ರವಿ

‘ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಜೋರಾಗಲು ಮುಖ್ಯಮಂತ್ರಿ ಕುಮಾರಸ್ವಾಮಿಯೇ ಕಾರಣ, ಅವರ ಮಾತು, ಮನೋಭಾವ, ನಡವಳಿಕೆಯೊಂದಿಗೆ ಬಜೆಟ್‍ನಲ್ಲಿ ಕೆಲವು ಜಿಲ್ಲೆಗಳಿಗೆ ಮಾತ್ರ ಆದ್ಯತೆ ನೀಡಿದ್ರಿಂದ ಅಸಮತೋಲನ ಹಾಗೂ ಆಕ್ರೋಶ ನಿರ್ಮಾಣವಾಗಿದೆ. ಸಿಎಂಗೆ ಸಮಚಿತ್ತ ಹಾಗೂ ಸಮದೃಷ್ಠಿ ಇಲ್ಲದೆ ಇರೋದೇ ಇದಕ್ಕೆ ಕಾರಣ ‘ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಅವರು ಗೆಲ್ಲಿಸಿದವರಿಗೆ ಮಾತ್ರ ಮುಖ್ಯಮಂತ್ರಿ ಅನ್ನೋದಾದ್ರೆ, ಅವರು 37 ಜನರ ಮುಖ್ಯಮಂತ್ರಿ ಅಷ್ಟೆ, 224 ಜನರನ್ನ ಪ್ರತಿನಿಧಿಸಲು ಆಗಲ್ಲ ಎಂದ್ರು. ಅವರ ತಪ್ಪನ್ನ ಮುಚ್ಚಿಕೊಳ್ಳಲು ಮಾಧ್ಯಮದವರ ಮೇಲೆ ಆರೋಪ ಮಾಡಿದ್ರು ಎಂದು ಮಾಧ್ಯಮಗಳ ಪರ ಬ್ಯಾಟ್ ಬೀಸಿದರು, ಬಿಜೆಪಿ ಪ್ರತ್ಯೇಕ ರಾಜ್ಯದ ಪರ ಇಲ್ಲ. ನಮ್ಮದ್ದೇನಿದ್ರು ಅಖಂಡ ಹಾಗೂ ಸುವರ್ಣ ಕರ್ನಾಟಕದ ಬದ್ಧತೆ, ರಾಜ್ಯ ಒಡೆಯಲು ನಾವು ಬಿಡಲ್ಲ, ಅಂತವರಿಗೆ ನಮ್ಮ ಬೆಂಬಲವಿಲ್ಲ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com