ಇದು ಕರ್ನಾಟಕ ಸರ್ಕಾರ ಆಗಿಲ್ಲ, ಮೈಸೂರು ಸರ್ಕಾರ ಆಗಿದೆ : ನಾಡೋಜ ಪಾಟೀಲ ಪುಟ್ಟಪ್ಪ ಕಿಡಿ

‘ ಪ್ರತ್ಯೇಕ ರಾಜ್ಯದ ಹೋರಾಟದಿಂದ ಏನು ಆಗೋದಿಲ್ಲ. ಉತ್ತರಕರ್ನಾಟಕಕ್ಕೆ ಅನ್ಯಾಯವಾಗಿದೆ ನಿಜ. ಅದನ್ನು ಹೋರಾಟದ ಮೂಲಕ ಪಡೆಯಬೇಕಿದೆ. ಅಖಂಡ ಕರ್ನಾಟಕ ಹೀಗೆ ಇರಬೇಕು ‘ ಎಂದು ನಾಡೋಜ , ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಹರಿಹಾಯ್ದರು. ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಮಾತನಾಡಿದ ಅವರು, ‘ ಪ್ರತ್ಯೇಕ ರಾಜ್ಯದ ಸಲುವಾಗಿ ಹೋರಾಟ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ ‘ ಎಂದರು.

‘ ಇಂತಹ ಹೋರಾಟಗಳಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. 100 ಜನ ಶಾಸಕರು ಉತ್ತರ ಕರ್ನಾಟಕದವರು ಇದ್ದಾರೆ. ಇವರೆಲ್ಲ ಮಾತನಾಡಿದ್ರೆ ಸರ್ಕಾರ ಬುಡಮೇಲು ಆಗಿ ಹೋಗುತ್ತದೆ. ನಮ್ಮ ಭಾಗದ ಶಾಸಕರು 100 ಮಂದಿ ಇದ್ದರೂ ಏನನ್ನೂ ಮಾಡಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಯಾರು ಧ್ವನಿ ಎತ್ತುವವರಿಲ್ಲ. ಬೆಳಗಾವಿ ಸುವರ್ಣಸೌಧ ನಿರುಪಯೋಗಿ ಆಗಿದೆ ‘ ಎಂದರು.

‘ ಇದು ಕರ್ನಾಟಕ ಸರ್ಕಾರ ಆಗಿಲ್ಲ ಮೈಸೂರು ಸರ್ಕಾರ ಆಗಿದೆ. ರಾಜ್ಯ ಪುನರ ವಿಂಗಡನೆ ಆಗಿ ಕರ್ನಾಟಕವಾಗಿದೆ. ಆದ್ರೇ, ಆಗಬೇಕಾದ ಅಭಿವೃದ್ಧಿ ಇನ್ನೂ ಆಗಿಯೇ ಇಲ್ಲ. ಇನ್ನೂ ಕೂಡ ಮೈಸೂರಿನ ನಂಟು ಹಾಗೇ ಇದೆ. ಈ ಹಿಂದೆ 1946ರಲ್ಲಿ ನರಗುಂದ ತಾಲೂಕು ಪ್ರತ್ಯೇಕ ರಾಜ್ಯವಾಗಿತ್ತು. ಅದು 58 ಹಳ್ಳಿಗಳಿಂದ ಸೇರಿ ಆಗಿತ್ತು. ಮಕ್ಕಳಾಗದ್ದಿದವರು ಮಗುವನ್ನು ದತ್ತು ಪಡೆದು ಜೀವನ ನಡೆಸಿದಂತಾಗಿತ್ತು. ಅದು ಆ ಕಾಲದಲ್ಲಿ. ಕರ್ನಾಟಕದ ಬೆಳವಣಿಗೆಗೆ ಮೈಸೂರಿನವರು ಏನನ್ನು ಮಾಡಲಿಲ್ಲ. ನಾನು ಬಾಲ್ಯದಿಂದಲೂ ಮೈಸೂರಿನ ಎಲ್ಲಾ ನಾಯಕರನ್ನೂ ಬಲ್ಲವನಾಗಿದ್ದೇನೆ ‘ ಎಂದು ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತು ಅಭಿವೃದ್ಧಿ ವಿಷಯವಾಗಿ ಕಿಡಿಕಾರಿದರು.

Leave a Reply

Your email address will not be published.