ದೊಡ್ಡಬಳ್ಳಾಪುರ : ಲೈವ್ ವಿಡಿಯೋ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ..!
ಯುವಕನೋರ್ವ ಲೈವ್ ವಿಡಿಯೋ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ನಗರದ ಕಲ್ಲುಪೇಟೆ ನಿವಾಸಿಯಾದ ದೇವರಾಜ ಎಂಬಾತ ವಿಷ ಕುಡಿದು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ದುರ್ದೈವಿಯಾದ 23 ವರ್ಷದ ದೇವರಾಜ ಅಪ್ಪ ಅಮ್ಮ ಇಲ್ಲದ ಯುವಕ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದ. ದೇವರಾಜ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಪ್ರೇಮ ವಿವಾಹಕ್ಕೆ ಮದುವೆಗೆ ಮನೆಯವರ ವಿರೋಧವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ದೊಡ್ಡಬಳ್ಳಾಪುರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.