ಕುಟುಂಬ ರಾಜಕಾರಣಕ್ಕೆ ಉತ್ತರ ಕರ್ನಾಟಕವನ್ನು ಬಲಿ ಕೊಡಬೇಡಿ : ಯಡಿಯೂರಪ್ಪ

ಬೆಳಗಾವಿ : ಉತ್ತರ ಕರ್ನಾಟಕ ಪ್ರತ್ಯಕ ರಾಜ್ಯ ವಿಚಾರ. ಬೆಳಗಾವಿಯಲ್ಲಿ ಮಾಜಿ ಸಿಎಂ ಬಿಎಸ್ವೈ ಪತ್ರಿಕಾಗೋಷ್ಠಿ ನಡೆಸಿದರು. ಬಿಎಸ್ವೈ ಗೆ ಮಾಜಿ ಸಚಿವ ಉಮೇಶ ಕತ್ತಿ, ಸೇರಿ ೧೦ ಕ್ಕೂ ಅಧಿಕ ಬಿಜೆಪಿ ಶಾಸಕರು ಸಾಥ್ ನೀಡಿದ್ದಾರೆ.

‘ ಬೆಳಗಾವಿ ಸುವರ್ಣ ಸೌಧ ಮುಂದೆ ಮಠಾದೀಶರು ಹೋರಾಟ ಮಾಡುವ ಸ್ಥಿತಿ ಈ ಹಿಂದೆ ಬಂದಿಲ್ಲ. ಇದಕ್ಕೆ ಸಿಎಂ ಕುಮಾರಸ್ವಾಮಿ ಅವರೇ ಕಾರಣ. ಕುಮಾರಸ್ವಾಮಿ ಉತ್ತರ ಕರ್ನಾಟಕ ಜನ ಓಟ್ ಹಾಕಿಲ್ಲ ಅಂತಾ ಹೇಳಿದ್ದು. ಸಿಎಂ ಮಾಧ್ಯಮ ಮೇಲೆ ರಾಜ್ಯ ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಹಗುರವಾಗಿ ಮಾತನಾಡಿದ್ದಾರೆ ‘ ಎಂದಿದ್ದಾರೆ.

‘ ಜಾತಿ ವಿಷ ಬೀಜ ಬಿತ್ತುವ ಕೆಲಸ ಕುಮಾರಸ್ವಾಮಿ ಮಾಡುತ್ತಿದ್ದಾರೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ತುಟಿ ಬಿಚ್ಚುತ್ತಿಲ್ಲ. ಇದರ ಅರ್ಥ ಕುಮಾರಸ್ವಾಮಿ ಅವರ ಮಾತಿಗೆ ದೇವೇಗೌಡ ಸಹಮವಿದೆ ‘ ಎಂದು ಬಿಎಸ್ವೈ ಆರೋಪಿಸಿದರು.

‘ ಯಾವುದೇ ಕಾರಣಕ್ಕೂ ರಾಜ್ಯ ಒಡೆಯುವ ಕೆಲಸ ಬೇಡಾ. ಉತ್ತರ ಕರ್ನಾಟಕ ಬಂದ್ ಕರೆ ಸರಿಯಲ್ಲ‌. ನಾವು ಸದನದ ಒಳಗೆ, ಹೊರಗೆ ಉತ್ತರ ಕರ್ನಾಟಕ ಜನರ ಪರವಾಗಿ ಹೋರಾಟ ಮಾಡುತ್ತೇವೆ ‘ ಎಂದು ಬಿಎಸ್ವೈ ಭರವಸೆ ನೀಡಿದರು.

‘ ಅಖಂಡ ಕರ್ನಾಟಕ ನಿರ್ಮಾಣ ಕ್ಕೆ ಸಾಕಷ್ಟು ಹೋರಾಟ, ತ್ಯಾಗಗಳಾಗಿವೆ. ನೀವು ಪ್ರಧಾನಿ ಆಗಿದ್ದಾಗ ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದೀರಾ..? ‘ ಎಂದು ಬಿಎಸ್ವೈ ಪ್ರಶ್ನಿಸಿದ್ದಾರೆ. ‘ ಸಿಎಂ ಕುಮಾರಸ್ವಾಮಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಕುಂಟುಂಬ ರಾಜಕಾರಣಕ್ಕೆ ಉತ್ತರ ಕರ್ನಾಟಕ ಬಲಿ ಕೊಡಬೇಡಿ ‘ ಎಂದಿದ್ದಾರೆ.

‘ ಅಪ್ಪ ಮಕ್ಕಳ ಹೇಳಿಕೆಗಳು ಬಾಯಿ ತಪ್ಪಿ ಬಂದಿಲ್ಲ. ಉತ್ತರ ಕರ್ನಾಟಕ ಕೊಡುಗೆ ಏನು ಎಂದು ಸಿಎಂ ಪ್ರಶ್ನೆ ಮಾಡ್ತಾರೆ. ಉತ್ತರ ಕರ್ನಾಟಕದ ಕೊಡುಗೆ ಅಪರವಾಗಿದೆ. ಅಕ್ಕಿ, ಬೆಳೆ, ವಿದ್ಯುತ್ ಹೀಗೆ ಎಲ್ಲ ರೀತಿ ಕೊಡುಗೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಉತ್ತರ ಕರ್ನಾಟಕ ಅನ್ಯಾಯ ಆಗಿಲ್ಲಾ ಅಂತಾರೆ. ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವಕ ಕೆಲಸ ಆಗುತ್ತಿಲ್ಲ ‘ ಎಂದರು.

Leave a Reply

Your email address will not be published.