ಪ್ರವಾಹದ ರಭಸಕ್ಕೆ ಕೊಚ್ಚಿಹೊದ ಕಾರುಗಳು : ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು…!

ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಕಾರಿನಲ್ಲಿದ್ದ 4 ಪ್ರಯಾಣಿಕರು ಮತ್ತೊಂದು ಕಾರಿನ ಮೇಲೆ ಹತ್ತಿದ್ದಾರೆ. ಕೊನೆಯ ವ್ಯಕ್ತಿ ಹತ್ತುತ್ತಿದ್ದಂತೆ ಸ್ಯಾಂಟ್ರೋ ಕಾರು ಕೊಚ್ಚಿ ಹೋಗಿದೆ. ಕೆಲವೇ ಕ್ಷಣದಲ್ಲಿ ಪ್ರಯಾಣಿಕರು ರಕ್ಷಣೆ ಪಡೆಯಲು ಹತ್ತಿದ್ದ ಇನ್ನೊಂದು ಕಾರು ಕೊಚ್ಚಿ ಹೋಗಿದೆ. ಈ ಕಾರು ಕೊಚ್ಚಿ ಹೋಗುವುದರ ಒಳಗಡೆ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿತ್ತು.

ಎರಡು ಕಾರಿನ ಜೊತೆ ಅಲ್ಲೆ ನಿಂತಿದ್ದ ಆಟೊ ರಿಕ್ಷಾ ಸಹ ಪ್ರವಾಹದ ನೀರಿಗೆ ಕೊಚ್ಚಿ ಹೋಗಿದೆ. ಕೆಲವು ಸೆಕೆಂಡ್ ಗಳಲ್ಲಿ ನಡೆದ ಈ ಎಲ್ಲ ದೃಶ್ಯಗಳನ್ನು ಸಮೀಪದಲ್ಲಿದ್ದ ವ್ಯಕ್ತಿಗಳು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com