ತುಮಕೂರು : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ : ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳ ಕಿತ್ತಾಟ…!

ತುಮಕೂರ : ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಲುವಾಗಿ ಸೇರಿದ್ದ ಪೂರ್ವಭಾವಿ ಸಭೆಯಲ್ಲಿ ಜವಾಬ್ದಾರಿಯುತ ಅಧಿಕಾರಿಗಳೇ ಕಿತ್ತಾಡಿಕೊಂಡಂತಹ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ನಡೆದಿದೆ.

ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ್ ನಾಗರಾಜು ಹಾಗೂ ತಾಲ್ಲೂಕು ಪಂಚಾಯ್ತಿ  ನಾರಾಯಣ ಸ್ವಾಮಿ ನಡುವೆ ಸ್ವಾತಂತ್ರ್ಯ ದಿನಾಚರಣೆ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಸಭೆಯ ವೇಳೆ ಇಒ ನಾರಾಯಣಸ್ವಾಮಿ ತಮ್ಮ ಕಛೇರಿಯ ಕಡತಗಳನ್ನ ಪರಿಶೀಲಿಸಿಕೊಂಡು ಕುಳಿತು ಉದಾಸೀನತೆ ತೋರಿದ್ದಾರೆ, ಇದರಿಂದ ಸಿಡಿಮಿಡಿಗೊಂಡ ತಹಸಿಲ್ದಾರ್ ನಾಗರಾಜು ಇಒ ನಾರಾಯಣ ಸ್ವಾಮಿಗೆ ನೀವೇ ಮುಂದೆ ನಿಂತು ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸುವಂತೆ ತಾಕೀತು ಮಾಡಿದ್ದಾರೆ.

ಆದ್ರೆ ಇದನ್ನ ಒಪ್ಪಿಕೊಳ್ಳದ ಇಒ ನಾರಾಯಣ ಸ್ವಾಮಿ,  ನಮಗೆ ಕಚೇರಿಯಲ್ಲಿಯೇ ಬೇಕಾದಷ್ಟು ಕೆಲಸವಿದೆ , ನಾನು ಜವಾಬ್ದಾರಿ ತೆಗೆದುಕೊಳ್ಳೋಕ್ಕಾಗಲ್ಲ ಅಂತ ಉದ್ಧಟತನದಿಂದ ಮಾತನಾಡಿದ್ದಾರೆ. ಈ ವಿಚಾರವಾಗಿ ತಹಸಿಲ್ದಾರ್ ನಾಗರಾಜು ಹಾಗೂ ಇಒ ನಾರಾಯಣಸ್ವಾಮಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಸಭೆಯಲ್ಲೇ ಅಧಿಕಾರಿಗಳು ಕಚ್ಚಾಡುತ್ತಿದ್ದನ್ನ ಗಮನಿಸಿದ ಪಿಡಿಓ ನಾರಾಯಣ್  ಮದ್ಯೆ ಪ್ರವೇಶಿಸಿ ಇಬ್ಬರೂ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲಾ ಹೊಂದಾಣಿಕೆಯಿಂದ ಸ್ವಾತಂತ್ರ್ಯ ದಿನವನ್ನ ಆಚರಿಸಿ ರಾಷ್ಟ್ರೀಯ ಹಬ್ಬಕ್ಕೆ ಗೌರವಿಸುವಂತೆ ಬುದ್ದಿವಾದ ಹೇಳಿದ್ದಾರೆ. ಕಿರಿಯ ಅಧಿಕಾರಿಯಿಂದ ಬುದ್ದಿವಾದ ಹೇಳಿಸಿಕೊಂಡ ಹಿರಿಯ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com