ಹೊಸ ಅವತಾರದಲ್ಲಿ ಡಿಂಪಲ್ ಕ್ವೀನ್ : ‘ಏಪ್ರಿಲ್’ನಲ್ಲಿ ರಚಿತಾ ರಾಮ್ ಹೀಗಿರುತ್ತಾರಂತೆ…!

ಬೆಂಗಳೂರು : ಡಿಂಪಲ್ ಸ್ವೀನ್ ರಚಿತಾ ರಾಮ್ ದಿನೇ ದಿನೇ ಹೇರ್ ಸ್ಟೈಲ್ ಹಾಗೂ ಅವರ ಹೊಸ ಸಿನಿಮಾಗಳ ಬಗ್ಗೆ ಯಾವಗಲೂ ಸುದ್ದಿಯಲ್ಲಿರುತ್ತಾರೆ, ಹಾಗೇಯೇ ರಚಿತಾ ರಾಮ್ ಇದೇ  ಮೊದಲ ಬಾರಿಗೆ ನಾಯಕಿ ಪ್ರಧಾನ ಚಿತ್ರವನ್ನು  ನಟಿಸುತ್ತಿದ್ದಾರೆ.
ಡಿಂಪಲ್ ಕ್ವೀನ್ ನ ಸಿನಿಮಾದಲ್ಲಿ ಸಖತ್ ಗ್ಲಾಮರ್ ಆಗಿ ಕಾಣಿಸಿಕೊಳ್ಳುವ  ರಚಿತಾ ಈ ಸಿನಿಮಾದಲ್ಲಿ ಅವರು ಗ್ಲಾಮರ್ ಇಲ್ಲದ ಪಾತ್ರವಂತೆ. ಈ ಚಿತ್ರವನ್ನು ಸತ್ಯ ರಾಯಲ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಇದೊಂದು ನೈಜ ಘಟನೆಯೊಂದನ್ನು ಆಧರಿಸಿ ಮಾಡಿರುವ ಕಥೆಯಾಗಿದ್ದು. ಚಿತ್ರದಲ್ಲಿ ರಚಿತಾ ಅವರು ಏಪ್ರಿಲ್ ಡಿಸೋಜಾ ಎನ್ನುವ ಪಾತ್ರ ಮಾಡುತ್ತಿದ್ದು, ಚಿತ್ರಕ್ಕೆ ‘ಏಪ್ರಿಲ್’ ಎಂದು ಟೈಟಲ್ ಇಡಲು ಒಂದು ಕಾರಣವಿದೆಯಂತೆ.
ವಸಂತಕಾಲ ಬಂದು ಎರಡು ತಿಂಗಳ ನಂತರ ಏಪ್ರಿಲ್ ತಿಂಗಳು ಬರಲಿದ್ದು, ಅದರಂತೆ ನಾಯಕಿಯ ಬದುಕಿನಲ್ಲೊಂದು ಎರಡನೇ ಛಾನ್ಸ್ ಸಿಗುತ್ತದೆ. ಆ ಕಾರಣಕ್ಕಾಗಿ ಆಕೆಯ ತಂದೆ-ತಾಯಿ ಏಪ್ರಿಲ್ ಡಿಸೋಜಾ ಎಂದು ಹೆಸರಿಟ್ಟಿರುತ್ತಾರೆ. ಅದೇ ಕಾರಣಕ್ಕೆ ‘ಏಪ್ರಿಲ್’ ಎಂಬ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com