ಬೀದರ್ : ಕಣ್ಣಿಗೆ ಖಾರದ ಪುಡಿ ಎರಚಿ 35 ಲಕ್ಷ ದೋಚಿದ ಖದೀಮರು : ಬೈಕ್ ಸಮೇತ ಪರಾರಿ..!

ಬೀದರ್ : ನಿನ್ನೆ ರಾತ್ರಿ ಕಣ್ಣಿಗೆ ಕಾರದ ಪುಡಿ ಎರಚಿದ ಖದೀಮರು ಬರೋಬ್ಬರಿ 35 ಲಕ್ಷ ರೂ ದೋಚಿರುವ ಘಟನೆ ಬೀದರ್ ನ ಅಲ್ಲಮ ಪ್ರಭು ನಗರದಲ್ಲಿ ನಡೆದಿದೆ. ಪ್ರಕಾಶ, ಮಹದೇವ ಎಂಬವರು ಹೊಂಡಾ ಆ್ಯಕ್ಟೀವಾದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ವಾಹನ ಸಮೇತ ಕಳ್ಳತನ ಮಾಡಿದ್ದಾರೆ.

ಸ್ಕೂಟಿಯ ಡಿಕ್ಕಿ ಮತ್ತು ತಮ್ಮ ಮುಂದುಗಡೆ ಹಣವಿಟ್ಟುಕೊಂಡು ಬೈಕ್ ಚಲಾಯಿಸುತಿದ್ದಾಗ ಖಾರದ ಪುಡಿ ಎರಚಿದ್ದಾರೆ. ಹಣ ಹಾಗೂ ಬೈಕ್ ಸಮೇತ ಕಳ್ಳರು ಪರಾರಿಯಾಗಿದ್ದಾರೆ. ಒಂದು ಕೀ ಮೀ ದೂರದಲ್ಲಿ ಸ್ಕೂಟಿಯನ್ನು ಅಲ್ಲೇ ಬಿಟ್ಟು ಖದೀಮರು ಹಣ ತೆಗೆದುಕೊಂಡು ಹೋಗಿದ್ದಾರೆ. ಹಣವಿದ್ದ ಸ್ಕೂಟಿ ಹೈದ್ರಾಬಾದ್ ರೋಡ್ ಹತ್ತಿರ ಪತ್ತೆಯಾಗಿದೆ.

ಕಳ್ಳರು ಹಣ ತೆಗೆದುಕೊಂಡು ಹೈದ್ರಾಬಾದ್ ಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com