ಫರಂಗಿಪೇಟೆ ನೈತಿಕ ಪೋಲೀಸ್ ಗಿರಿ ಪ್ರಕರಣ : ಬಂಟವಾಳ ಪೋಲೀಸರಿಂದ ನಾಲ್ವರ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಉಮರ್ ಫಾರುಕ್ (36) ಅರ್ಫಾತ್ (28 ) ಮೊಹಮ್ಮದ್ ಅಫ್ರಿದ್ (21) ಮೊಹಮ್ಮದ್ ಇಕ್ಬಾಲ್ (32) ಬಂಧನಕ್ಕೊಳಗಾಗಿದ್ದಾರೆ.

ಇತರ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ. ನಿನ್ನೆ ಸಂಜೆ ಫರಂಗಿಪೇಟೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಭಿನ್ನ ಕೋಮಿನ ಯುವಕ ಯುವತಿ ಜೊತೆಯಾಗಿ ಕಾಣಿಸಿಕೊಂಡದ್ದಕ್ಕಾಗಿ ಹಲ್ಲೆ ಮಾಡಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com