ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಹೇಳಿ ಹಿರಿಯ ಕಲಾವಿದೆಗೆ ನಿರ್ದೇಶಕನಿಂದ ವಂಚನೆ..!

ಬೆಂಗಳೂರು : ಕಿರುತೆರೆ ಮೂಲಕ ಹೆಸರು ಮಾಡಿದ್ದ ಹಿರಿಯ ನಟಿ ಮಂಜುಳಮ್ಮ ಅವರಿಗೆ ನಿರ್ದೇಶಕ ನವೀನ ರೈ ಎಂಬಾತ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅವಕಾಶಗಳನ್ನು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿಯನ್ನ ಪಡೆದುಕೊಂಡು ನವೀನ್ ರೈ ಯಾವುದೇ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅವಕಾಶಗಳನ್ನ ಕೊಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜುಳಮ್ಮ ತಾವು ನೀಡಿದ ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ.  ಹಣ ಕೇಳಿದ್ದಕ್ಕೆ ನವೀನ  ಕೆಲ ಹುಡುಗರನ್ನು ಕಳುಹಿಸಿ ಆ ಹಿರಿಯಾ ನಟಿ ಮೇಲೆ ಹಲ್ಲೆ ಮಾಡಿಸಿದ್ದಾನೆ ಎಂದು ಮಂಜುಳಮ್ಮ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲ್ಲಿನ ವೀಣೆ ಧಾರಾವಾಹಿ ಶೂಟಿಂಗ್ ವೇಳೆ ಮಂಜುಳಮ್ಮ ಅವರಿಗೆ ನವೀನ್ ರೈ ಪರಿಚಯ ಮಾಡಿಕೊಂಡಿದ್ದನು. ಚಂದನವನದಲ್ಲಿ ತನಗೆ ಎಲ್ಲರೂ ಪರಿಚಯ ಸ್ಟಾರ್ ನಟರ ಸಿನಿಮಾದಲ್ಲಿ ಪೋಷಕ ಪಾತ್ರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಒಡವೆ ಹಾಗೂ 15 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ ಎಂದು ಮಂಜುಳಮ್ಮ ಆರೋಪಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com