ಬಳ್ಳಾರಿಯಲ್ಲಿ ಪತ್ತೆಯಾಯ್ತು ಪ್ಲಾಸ್ಟಿಕ್ ಮೊಟ್ಟೆ : ಆತಂಕದಲ್ಲಿ ಜನರು…!

ಬಳ್ಳಾರಿ : ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಸಿಕ್ಕಿದ್ದಾಯ್ತು, ಇದೀಗ ಪ್ಲಾಸ್ಟಿಕ್ ಮೊಟ್ಟೆ  ಸರದಿಯಾಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿದೆ.

ಬಳ್ಳಾರಿಯ  ಕೆಎಚ್ ಬಿ ಕಾಲೋನಿಯ ಅಂಗಡಿಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿದ್ದು. ಚಂದ್ರಶೇಖರ್ ಅವರು ಸೋಮವಾರ ಮೊಟ್ಟೆಗಳನ್ನು ಖರೀದಿಸಿ ಮನೆಗೆ ತಂದಿದ್ದಾರೆ. ಬಳಿಕ ಅಂದು ರಾತ್ರಿ ಒಂದು ಮೊಟ್ಟೆಯನ್ನು ಬೇಯಿಸಿ ತಿಂದಿದ್ದಾರೆ. ಆದರೆ ಅದು ಡೈಜೆಸ್ಟ್ ಆಗಿಲ್ಲ.

ರಾತ್ರಿ ತಿಂದ ಮೊಟ್ಟೆಯಿಂದ ಚಂದ್ರಶೇಖರ್ ಅವರಿಗೆ ಹಸಿವೇ ಆಗಲಿಲ್ಲ.ಇದರಿಂದ ಅನುಮಾನಗೊಂಡ ಚಂದ್ರಶೇಖರ್ ಮೊಟ್ಟೆಯನ್ನು ಪರೀಕ್ಷೆ ಮಾಡಿದ ನಂತರ ತಿಳಿಯಿತು ಅದು  ಪ್ಲಾಸ್ಟಿಕ್ ಮೊಟ್ಟೆಯೆಂದು.  ಹೀಗಾಗಿ ಚಂದ್ರಶೇಖರ್ ಅಂಗಡಿಯಲ್ಲಿ ಖರೀದಿಸಿದ್ದ ಮೊಟ್ಟೆಯನ್ನು ಸದ್ಯ ಪಶು ಆಸ್ಪತ್ರೆಯ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಿಂದ ಗ್ರಾಮಸ್ಥರು ಆಂತಕಕ್ಕೆ  ಒಳಗಾಗಿದ್ದಾರೆ.

Leave a Reply

Your email address will not be published.