ಕಲಬುರಗಿ : ಪ್ರತ್ಯೇಕ ರಾಜ್ಯದ ಒಲವು ತೋರಿದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್

‘ ಸಮಾನತೆ ಇಲ್ಲದಿದ್ರೆ ಕುಟುಂಬ ಪ್ರತ್ಯೇಕವಾಗೋದು ಸಹಜ. ಮನೆಯ ಯಜಮಾನ ಎಲ್ಲರನ್ನ ಸಮಾನವಾಗಿ ಕಾಣಬೇಕು. ತಾರತಮ್ಯ ಶುರುವಾದ್ರೆ ಅವಿಭಕ್ತ ಕುಟುಂಬ ವಿಭಕ್ತವಾಗುತ್ತೆ. ಸದ್ಯ ರಾಜ್ಯದಲ್ಲಿನ ಪರಿಸ್ಥಿತಿ ಆಗಿರೋದು ಹೀಗೇನೆ ‘ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರವಾಗಿ ಒಲವು ತೋರಿ ನಿವೃತ್ತ ನ್ಯಾಯ ಮೂರ್ತಿ ಅರಳಿ ನಾಗರಾಜ ಅವರು ಮಾತನಾಡಿದ್ದಾರೆ.

‘ ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಸ್ವಾಮೀಜಿಗಳು ಭಾಗಿಯಾಗಿರೋದು ಕೇವಲ ಪ್ರಚಾರಕ್ಕಾಗಿ. ಖಾದಿ ಜೊತೆ ಕಾವಿ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಸಮಾಜದ ಸ್ವಾಸ್ಥ ಕೆಡಿಸುತ್ತಿರೋದೇ ಕೆಲವು ಮಠಾಧೀಶರು. ಮಠಾಧೀಶರು ಒಳ್ಳೆ ಕೆಲಸ ಮಾಡಿದ್ರೆ ಈ ಗತಿ ಬರ್ತಿರಲಿಲ್ಲ ‘ ಎಂದು ಮಠಾಧೀಶರ ವಿರುದ್ದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ವಾಗ್ದಾಳಿ ನಡೆಸಿದರು.

One thought on “ಕಲಬುರಗಿ : ಪ್ರತ್ಯೇಕ ರಾಜ್ಯದ ಒಲವು ತೋರಿದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್

Leave a Reply

Your email address will not be published.

Social Media Auto Publish Powered By : XYZScripts.com