Eng vs Ind : ಟೆಸ್ಟ್ ಸರಣಿಯಲ್ಲಿ ಯಾರಿಗೆ ಜಯ..? ಭವಿಷ್ಯ ನುಡಿದ ದ್ರಾವಿಡ್ ಹೇಳಿದ್ದೇನು..?

ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ಬುಧವಾರದಿಂದ ಆರಂಭಗೊಳ್ಳಲಿದೆ. ಬರ್ಮಿಂಗ್ ಹ್ಯಾಮ್ ನಲ್ಲಿರುವ ಎಡ್ಜ್ ಬಾಸ್ಟನ್ ಮೈದಾನದಲ್ಲಿ ಮೊದಲ ಟೆಸ್ಟ್ ಮ್ಯಾಚ್ ನಡೆಯಲಿದೆ.

ಟಿ-20 ಸರಣಿಯನ್ನು ಭಾರತ ಗೆದ್ದರೆ, ಏಕದಿನ ಸರಣಿಯನ್ನು ಆತಿಥೇಯ ಇಂಗ್ಲೆಂಡ್ ಗೆದ್ದುಕೊಂಡಿದೆ. ಇದೀಗ ಟೆಸ್ಟ್ ಸರಣಿಯಲ್ಲಿ ಜಯ ಯಾರಿಗೆ ಒಲಿಯಲಿದೆ ಎಂಬುದು ಉಭಯ ದೇಶದ ಕ್ರಿಕೆಟ್ ಅಬಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಈ ನಡುವೆ ಟೆಸ್ಟ್ ಸರಣಿಯ ಫಲಿತಾಂಶ ಏನಾಗಲಿದೆ..? ಎಂಬ ಪ್ರಶ್ನೆಗೆ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಉತ್ತರಿಸಿದ್ದಾರೆ. ಟೆಸ್ಟ್ ಸರಣಿಯ ಬಗ್ಗೆ ಭವಿಷ್ಯ ನುಡಿದಿರುವ ರಾಹುಲ್ ದ್ರಾವಿಡ್ ‘2-1’ ರಿಂದ ಭಾರತ ಸಿರೀಸ್ ಗೆಲ್ಲಲಿದೆ ಎಂದು ಹೇಳಿದ್ದಾರೆ.

2007ರಲ್ಲಿ ಟೆಸ್ಟ್ ಸರಣಿಯಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡ 1-0 ಯಿಂದ ಸರಣಿ ಜಯ ಸಾಧಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com