ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು HDK ಮಾಧ್ಯಮಗಳ ಮೇಲೆ ಹರಿ ಹಾಯುವುದು ಸರಿಯಲ್ಲ : ಕಾಗೇರಿ

ಶಿರಸಿ : ‘ ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಮಾಧ್ಯಮಗಳ ಮೇಲೆ ಹರಿಹಾಯುವುದು ಸರಿಯಲ್ಲ. ಪ್ರತ್ಯೇಕ ಕರ್ನಾಟಕ ವಿಚಾರಕ್ಕೆ ಮಾಧ್ಯಮಗಳನ್ನು ಕುಮಾರಸ್ವಾಮಿ ದೂರಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭದ ಬಗ್ಗೆ ಈ ರೀತಿ ಮಾತನಾಡೋದು ಸರಿಯಲ್ಲ ‘ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

‘ ಶಾಸಕಾಂಗ, ನ್ಯಾಯಾಂಗಕ್ಕೆ ಇರುವಂತೆ ಪತ್ರಿಕಾ ರಂಗಕ್ಕೂ ಅದರದೇ ಆದ ಸ್ಥಾನ ಮಾನ ಇದೆ. ಪತ್ರಿಕಾ ರಂಗ ಬದ್ಧತೆಯಿಂದ ಕೆಲಸ ಮಾಡ್ತಿದೆ‌. ಮಾಧ್ಯಮಗಳ ಕುರಿತು ಕೀಳಾಗಿ ಮಾತನಾಡೋದು ಸರಿಯಲ್ಲ. ಕುಮಾರಸ್ವಾಮಿ ಅವರೇ ಹೇಳಿಕೊಂಡಂತೆ ಸಾಂದರ್ಭಿಕ ಶಿಶು ಅವರು.
ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ತಪ್ಪು ಮುಚ್ಚಿಕೊಳ್ಳಲು ವಿವಾದ ಸೃಷ್ಟಿಸುತ್ತಿವೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com