ಶ್ರೀರಂಗಪಟ್ಟಣದ ಸುಹೈಲ್ ಗೆ ‘ಯುವ-ವಿಜ್ಞಾನಿ’ ಗೌರವ : ಅಮೇರಿಕದಲ್ಲಿ 15ರ ಬಾಲಕನ ಸಾಧನೆ..

ಆತ ಇನ್ನು 15 ವರ್ಷದ ಪೋರ. ಕಾಲೇಜಿನಲ್ಲಿ ಓದಿಕೊಂಡು ಇರಬೇಕಾದ ಈ ಯುವಕ ಇದೀಗ ಚಿಕ್ಕ ವಯಸ್ಸಿನಲ್ಲಿಯೇ ಮಹಾನ್ ಸಾಧನೆ ಮಾಡಿ, ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಅಲ್ದೆ ತನ್ನ ಸಾಧನೆಯ ಮೂಲಕ ಯುವ ವಿಜ್ಞಾನಿ ಎನಿಸಿ ದೇಶಕ್ಕೆ ಕೀರ್ತಿ ತಂದಿದ್ದಾನೆ. ಆಗಿದ್ರೆ ಯಾರು ಆ ಯುವ ವಿಜ್ಞಾನಿ ಯುವಕ..? ಏನೀಗ ಯುವಕ ಸಾಧನೆ ಅಂತೀರಾ ?

ಹೌದು ! ಹೀಗೆ ಅನೇಕ ಪ್ರಶಸ್ತಿಗಳೊಂದಿಗೆ ನಿಂತಿರೋ ಈ ಯುವಕ ಹೆಸ್ರು ಮಹಮದ್ ಸುಹೇಲ್ ಅಂತಾ. ವಯಸ್ಸು ಇನ್ನು ೧೫ ವರ್ಷ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಲೀಂ ಮತ್ತು ಶಿಕ್ಷಕಿ ಡಾ. ಪರ್ವಿನ್ ರ ಸುಪುತ್ರ. ಈ ವಯಸ್ಸಿಗೆ ಈತ ಯುವ ವಿಜ್ಞಾನಿ ಎನಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಪತಾಕೆ ಹಾರಿಸಿದ್ದಾನೆ. ಇತ್ತೀಚೆಗೆ ಅಮೇರಿಕಾದಲ್ಲಿ‌ ನಡೆದ ೮೧ ರಾಷ್ಟ್ರಗಳ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ತನ್ನ ಸಹಪಾಠಿ ಸ್ವಸ್ತಿಕ್ ಪದ್ಮ ಜೊತೆಗೂಡಿ ಭಾರತವನ್ನು ಪ್ರತಿನಿಧಿಸಿ ಮಕ್ಕಳ ಅಪೌಷ್ಟಿಕತೆಗೆ‌ ಕಾರಣವಾಗಿರೋ ಅಂಶಗಳು ಕುರಿತಂತೆ ವೈಜ್ಞಾನಿಕ ಸಂಶೋಧನಾ ಪ್ರಬಂಧ ಮಂಡಿಸಿ ಭಾರತಕ್ಕೆ ೨ ನೇ ಗ್ರಾಂಡ್ ಅವಾರ್ಡ್ ಪ್ರಶಸ್ತಿ ಗಳಿಸಿ ಕೀರ್ತಿ ತಂದಿದ್ದಾನೆ. ತನ್ನ ಸಾಧನೆ ದೇಶಕ್ಕೆ ಮತ್ತು ತನ್ನ ಪೋಷಕರಿಗೆ ಕೀರ್ತಿ ತಂದಿರೋದಾಗಿ ಸುಹೇಲ್ ಸಂತಸ ವ್ಯಕ್ತಪಡಿಸ್ತಿದ್ದಾನೆ.

ಇನ್ನು ಯುವ ವಿಜ್ಞಾನಿಯಾಗಿ ಹೆಸ್ರು ಗಳಿಸಿರೋ ಸುಹೇಲ್ ಸದಾ ಕ್ರೀಯಾಶೀಲ. ಹೊಸ ಹೊಸ ವಿಚಾರ ತಿಳಿಯಲು ಸದಾ ಕುತೂಹಲ‌ ಈತನಲ್ಲಿದೆ. ಇದಕ್ಕಾಗಿ ಈತ ಮನೆಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಅಂತರ್ಜಾಲದಲ್ಲಿ ಏನಾದ್ರು ಹುಡುಕುತ್ತಿರುತ್ತಾನೆ. ಅಲ್ದೆ ತನ್ನ ಸಂಶೋದನೆಗೆ ಬೇಕಾದ ಮಾಹಿತಿಯನ್ನು ಪುಸ್ತಕಗಳಿಂದ ತಿಳಿಯುವ ಪ್ರಯತ್ನ ಮಾಡ್ತಾನೆ. ಇನ್ನು‌ ಮುದ್ದು ತಂಗಿಗೂ ಕೂಡ ಈತ ಕಲಿಸುವ ಪ್ರಯತ್ನ ಮಾಡ್ತಾನೆ. ಯುವ ವಿಜ್ಞಾನಿಯಾಗಿ ಅಮೇರಿಕಾದಲ್ಲಿ ಸಾಧನೆ ಮಾಡಿರೋ ತಮ್ಮ ಪುತ್ರನ‌ ಸಾಧನೆಗೆ ಈತನ ಪೋಷಕರು ಕೂಡ ಸಂತಸಗೊಂಡಿದ್ದಾರೆ. ಅಲ್ದೆ ಚಿಕ್ಕ ವಯಸ್ಸಿನಲ್ಲಿ ಆತನಲ್ಲಿದ್ದ ಪ್ರಶ್ನಿಸುವ ಗುಣ ಇಂದು ಆತ‌ನನ್ನು ಇಲ್ಲಿಯವರೆಗೆ ಕರೆ ತಂದಿದೆ ಅಂತಿದ್ದು, ಆತನ ಸಾಧನೆಯ ಹಿಂದಿರೋ ಎಲ್ಲಾ ಗುರು ಹಿರಿಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಒಟ್ಟಾರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಬಾಲ ಯುವಕ ಚಿಕ್ಕ ವಯಸ್ಸಿನಲ್ಲಿಯೇ ಯುವ ವಿಜ್ಞಾನಿಯಾಗಿ ಹೆಸ್ರು ಗಳಿಸಿದ್ದಾನೆ. ಈತನ ಸಾಧನೆಗೆ ರಾಷ್ಟ್ರ, ರಾಜ್ಯ, ಮತ್ತು ಜಿಲ್ಲಾ ಮಟ್ಟದಲ್ಲಿ‌ ಈಗಾಗಲೇ ಅನೇಕ ಪ್ರಶಸ್ತಿಗಳ ಈತನಿಗೆ ಈಗಾಗಲೇ ಅರಸಿ ಬಂದಿದೆ. ಇದೀಗ ಅಮೇರಿಕಾದಲ್ಲಿ ಮಾಡಿರೋ ಈತನ ಸಾಧನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಕೀರ್ತಿ ಹೆಚ್ಚಿಸಿದೆ. ಈತನ ಸಾಧನೆಗಾಗಿ ಈ ಬಾಲ ವಿಜ್ಞಾನಿಯ ಹೆಸ್ರನ್ನು ಗ್ರಹವೊಂದಕ್ಕೆ ಇಡಲು ಅಮೇರಿಕಾ ತೀರ್ಮಾನಿಸಿರೋದು ಭಾರತೀಯರಾದ ನಮ್ಮೆಲ್ಲರ ಹೆಮ್ಮೆಯೆ ಸರಿ.

Leave a Reply

Your email address will not be published.

Social Media Auto Publish Powered By : XYZScripts.com