Women’s Cricket : T20ಯಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ಸರಿಗಟ್ಟಿದ ಸ್ಮೃತಿ ಮಂದಾನಾ

ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ಸಾರ್ವಕಾಲಿಕ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಇಂಗ್ಲೆಂಡಿನ KIA ಸೂಪರ್ ಲೀಗ್ ನಲ್ಲಿ ವೆಸ್ಟರ್ನ್ ಸ್ಟಾರ್ಮ್ ತಂಡದ ಪರವಾಗಿ ಆಡುತ್ತಿರುವ ಸ್ಮೃತಿ ಮಂದಾನಾ ರವಿವಾರ ನಡೆದ ಪಂದ್ಯದಲ್ಲಿ ಲಾಫ್ ಬ್ರಾಹ್ ಲೈಟ್ನಿಂಗ್ ತಂಡದ ವಿರುದ್ಧ ಮಿಂಚಿನ ಅರ್ಧಶತಕ ಸಿಡಿಸಿದ್ದಾರೆ.

ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಮೃತಿ ಮಂದಾನಾ ಒಟ್ಟು 19 ಎಸೆತಗಳನ್ನು ಎದುರಿಸಿ 52 ರನ್ ಗಳಿಸಿದರು. ಈ ಮೂಲಕ ಅಂತರಾಷ್ಟ್ರೀಯ ಮಹಿಳಾ ಟಿ-20 ಕ್ರಿಕೆಟ್ ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ, ನ್ಯೂಜಿಲೆಂಡ್ ಆಟಗಾರ್ತಿ ಸೋಫಿ ಡಿವೈನ್ ಅವರನ್ನು ಸರಿಗಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com