SHPSK ಆಡಿಯೋ ರಿಲೀಸ್ : ಕಾಸರಗೋಡು ಶಾಲೆಯ ಬೆಲ್ ಹೊಡೆದ ಕಿಚ್ಚ ಸುದೀಪ್…

ಬೆಂಗಳೂರು : ದಡ್ಡ ದಡ್ಡ ಸಾಂಗ್  ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ  ಆಡಿಯೋವನ್ನು ಸಿಡಿ ಮೂಲಕ ಬಿಡುಗಡೆ ಮಾಡುವಂತೆ ಮಾಡದೆ, ಸ್ಕೂಲ್‌ ಬೆಲ್‌ನ್ನು ವೇದಿಕೆ ಮೇಲೆ ಕ್ರಿಯೇಟ್‌ ಮಾಡಿ, ಬೆಲ್‌ನ್ನು ಸುದೀಪ್‌ ಅವರಿಂದ ಹೊಡೆಸಿ ಬಿಡುಗಡೆ ಮಾಡಿದರು. ಈ ಕಾನ್ಸೆಪ್ಟ್‌ಗೆ ಸುದೀಪ್‌ ಸಹ ಸಂತಸ ವ್ಯಕ್ತಪಡಿಸಿದ್ದು, ರಿಷಬ್‌ ಅವರ ಇನ್ನೋವೇಟಿವ್‌ ಐಡಿಯಾವನ್ನು ಮೆಚ್ಚಿಕೊಂಡರು.

ಸಾಮಾನ್ಯವಾಗಿ ಆಡಿಯೋಗಳನ್ನು ಸಿಡಿ ಅಥವಾ ಪೆನ್‌ಡ್ರೈವ್‌ಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ ರಿಷಬ್‌ ಶೆಟ್ಟಿ ಮಾತ್ರ ಬಹಳ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಪ್ಲಾನ್‌ ಮಾಡಿ ಶಾಲೆಯ ಬೆಲ್ ಹೊಡೆಯುವ ಮೂಲಕ ಆಡಿಯೋ ರಿಲೀಸ್ ಮಾಡಿದ್ದರು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡೀ ಸಿನಿಮಾ ಕಾಸರಗೋಡು ಭಾಗದ ಒಂದು ಕನ್ನಡ ಶಾಲೆಯಲ್ಲಿ ನಡೆಯುತ್ತದೆ. ಅಲ್ಲದೇ ಶಾಲೆಯಲ್ಲಿ ನಡೆಯುವ ಎಲ್ಲ ತರಲೆ ತಮಾಷೆ, ಜತೆಗೆ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ರಿಷಬ್‌ ಸಿನಿಮಾ ಮಾಡಿದ್ದಾರೆ.

sarkari hiriya prathamika shale

ಇನ್ನ  ಈ ಸಿನಿಮಾದ ಬಗ್ಗೆ ಮಾತನಾಡಿದ ಡೈರೆಕ್ಟರ್  ರಿಷಬ್‌ ಶೆಟ್ಟಿ,  ನಾವು ಈ ಆಡಿಯೋವನ್ನು ಹೀಗೆ ಬಿಡುಗಡೆ ಮಾಡಬೇಕು ಎಂದುಕೊಂಡು ಪ್ಲಾನ್‌ ಮಾಡಿಕೊಂಡಿದ್ದೇವು. ಸುದೀಪ್‌ ಅವರು ಬೆಲ್‌ ಹೊಡೆಯುವುದಕ್ಕೂ ಮುನ್ನ ನನ್ನ ಮುಖ ನೋಡಿ ನಗುತ್ತಿದ್ದರು. ಈ ಸಿನಿಮಾ ಒಂದೆರೆಡು ಹಾಡುಗಳು ಅವರನ್ನು ಪ್ಲ್ಯಾಶ್‌ಬ್ಯಾಕ್‌ಗೆ ಕರೆದುಕೊಂಡು ಹೋಯಿತಂತೆ. ಒಳ್ಳೆ ಹಾಡುಗಳನ್ನು ಕಂಪೋಸ್‌ ಮಾಡಿದ್ದೀರಾ ಎಂದು ಸಂಗೀತ ನಿರ್ದೇಶಕ ವಾಸುಕಿ ವೈಭವ್‌ಗೂ ಪ್ರಶಂಸೆ ವ್ಯಕ್ತಪಡಿಸಿದರು’

ಕಾಸರಗೂಡು ಶಾಲೆಯ ಬೆಲ್ ಹೊಡೆದ ಕಿಚ್ಚ ಸುದೀಪ್ : ಆಡಿಯೋ ರಿಲೀಸ್

Leave a Reply

Your email address will not be published.

Social Media Auto Publish Powered By : XYZScripts.com