ಮೋದಿ ಮೇಲೆ ರಾಸಾಯನಿಕ ದಾಳಿ ಮಾಡುವುದಾಗಿ ಫೋನಿನಲ್ಲಿ ಎಚ್ಚರಿಕೆ..! : ಆರೋಪಿಯ ಬಂಧನ

ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ವ್ಯಕ್ತಿಯೊಬ್ಬ ಫೋನ್ ಮೂಲಕ ಎಚ್ಚರಿಸಿದ್ದಾನೆ. 22 ವರ್ಷದ ಕಾಶೀನಾಥ್ ಮಂಡಲ್ ಎಂಬ ವ್ಯಕ್ತಿ ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ (NSG)ಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮೋದಿ ಮೇಲೆ ಕೆಮಿಕಲ್ ಅಟ್ಯಾಕ್ (ರಾಸಾಯನಿಕ ದಾಳಿ) ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ.

ನವದೆಹಲಿಯಲ್ಲಿರುವ (NSG) ಕಚೇರಿಯ ನಿಯಂತ್ರಣ ಕೊಠಡಿಯ ದೂರವಾಣಿ ನಂಬರಿಗೆ ಕರೆ ಮಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ರಾಸಾಯನಿಕ ದಾಳಿ ನಡೆಸುತ್ತೇನೆ ಎಂದು ಆರೋಪಿ ಎಚ್ಚರಿಸಿದ್ದ.

‘ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಕಾಶೀನಾಥ್ ಮಂಡಲ್ ಎಂಬಾತನನ್ನು ಜುಲೈ 27 ರಂದು ಮಹಾರಾಷ್ಟ್ರ ರಾಜಧಾನಿ ಮುಂಬೈ ಡಿ.ಬಿ ಮಾರ್ಗ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Leave a Reply

Your email address will not be published.