ಚಂದ್ರನಲ್ಲಿ ಸಾಯಿಬಾಬ ಪ್ರತಿಬಿಂಬ : ರಾತ್ರಿಯೆಲ್ಲಾ ಬಾಬ ದರ್ಶನ ಪಡೆದ ಜನರು…!

ಚಿಕ್ಕಬಳ್ಳಾಪುರ : ಪೂರ್ಣ ಚಂದಿರನಲ್ಲಿ ಸಾಯಿಬಾಬನ ಪ್ರತಿಬಿಂಬದ ವದಂತಿ ಹಬ್ಬಿದ್ದು, ಚಂದ್ರನನ್ನ ನೋಡಲು ಜನರು ಮುಗಿಬಿದಿರುವ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ  ನಡೆದಿದೆ.

ನೆನ್ನೆ ತಾನೇ ಸಾಯಿಬಾಬ ದೇವಸ್ಥಾನದ ಗೋಡೆ ಮೇಲೆ ಬಾಬ ಪ್ರತಿಬಿಂಬ ಮೂಡಿ ಬಾರಿ ಸುದ್ದಿ ಹಬ್ಬಿದ್ದು,ಇದೇ ಬೆನ್ನಲ್ಲೇ ಚಂದ್ರನೊಳಗಡೆ ಸಾಯಿಬಾಬ ಪ್ರತಿಬಿಂದ ಕಂಡಿದ್ದು ರಾತ್ರಿಯಿಡಿ ಜನರು ಬಯ್ನಾಕ್ಯುಲರ್ ಹಾಕಿಕೊಂಡು  ಜನರು ಸಾಯಿಬಾಬ ದರ್ಶನ ಕೊಟ್ಟರು ಎಂದು ವ್ಯಾಟ್ ಆಪ್ ನಲ್ಲಿ ಎಲ್ಲೇಡೆ ಸಂದೇಶ ಹಾರಿದಾಡಿದ್ದು,  ಪ್ರತ್ಯಕ್ಷವಾಗಿ ನೋಡಿದ ಜನರು, ಇದು ನಿಜ ನಾವು ನೋಡಿದ್ದೇವೆ, ತುಂಬಾ ಜನರು ದರ್ಶನ ಮಾಡಿದ್ದಾರೆ ಎಂದು ಜನರು ತಿಳಿಸಿದ್ದಾರೆ.

ನಡು ರಾತ್ರಿ ಬಂದ ವ್ಯಾಟ್ಸ್ ಆಪ್ ನ ಸಂದೇಶದಿಂದ ನಿದ್ದೆ ಗೆಟ್ಟು ಜನರು ಚಂದ್ರನಲ್ಲಿ ಸಾಯಿ ಬಾಬರನ್ನು ನೋಡಿದ್ದಾರೆ. ಗುರುಪೂರ್ಣಿಮಾ ದಿನದ ಹಿನ್ನಲೆ ಸಾಯಿಬಾಬ ದರ್ಶನ ನೀಡುವ ನಂಬಿಕೆಯಲ್ಲಿದ್ದ ಜನರು  ಚಂದ್ರನಿಗೆ ಪೂಜೆ ಪುನಸ್ಕಾರ ಮಾಡಿದ್ದರು.  ಭಾನುವಾರ ರಾತ್ರಿ ಆಗಸದಲ್ಲಿನ ಚಂದ್ರನ ನೋಡಿನ  ಜನರು ಪ್ರಸನ್ನರಾದರು ಆದರೆ ಸಾಯಿಬಾಬ ದರ್ಶನ ಕೇವಲ ವದಂತಿ ಎಂದು ವಿಚಾರವಂತರು ಎಂದು ಹೇಳುತ್ತಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com