ಅಫ್ರಿದಿ ದಾಖಲೆ ಸರಿಗಟ್ಟಿದ ಕ್ರಿಸ್ ಗೇಯ್ಲ್ : ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್..!

ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಪಾಕಿಸ್ತಾನದ ಆಲ್ರೌಂಡರ್ ಶಾಹಿದ್ ಅಫ್ರಿದಿ ಅವರ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಕ್ರಿಸ್ ಗೇಯ್ಲ್ ಸರಿಗಟ್ಟಿದ್ದಾರೆ.

ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಸೇಂಟ್ ಕಿಟ್ಟಿಸ್ ಪಾರ್ಕ್ ಮೈದಾನದಲ್ಲಿ ರವಿವಾರ ಮೂರನೇ ಏಕದಿನ ಪಂದ್ಯ ನಡೆಯಿತು. ಈ ಮ್ಯಾಚ್ ನಲ್ಲಿ ಗೇಯ್ಲ್ 5 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಅಫ್ರಿದಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಶಾಹಿದ್ ಅಫ್ರಿದಿ ಹಾಗೂ ಕ್ರಿಸ್ ಗೇಯ್ಲ್ ಅಂತರಾಷ್ಟ್ರೀಯ ಕ್ರಿಕಟ್ ನಲ್ಲಿ 476 ಸಿಕ್ಸರ್ ಬಾರಿಸಿದ್ದಾರೆ. ಬೂಮ್ ಬೂಮ್ ಅಫ್ರಿದಿ 524 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿ ಈ ಸಾಧನೆ ಮಾಡಿದ್ದರೆ, ಜಮೈಕಾದ ದೈತ್ಯ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ 443 ಪಂದ್ಯಗಳಲ್ಲಿಯೇ ಈ ರೆಕಾರ್ಡ್ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com