ಲೋಕಪಾಲ ನೇಮಕ ವಿಳಂಬವಾದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ : ಅಣ್ಣಾ ಹಜಾರೆ

ಲೋಕಪಾಲ ನೇಮಕ ವಿಳಂಬವಾದರೆ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಅಕ್ಟೋಬರ್ 2ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಗ್ರಹ ಹಮ್ಮಿಕೊಳ್ಳುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಅಹಮದ್ ನಗರ ಜಿಲ್ಲೆಯ ರಾಲೇಗನ್ ಸಿದ್ಧಿಯಲ್ಲಿ ಮಹಾತ್ಮಾ ಗಾಂಧಿ ಜಯಂತಿಯಾದ ಅಕ್ಟೋಬರ್ 2ರಿಂದ ತಾನು ಉಪವಾಸ ಪ್ರಾರಂಭಿಸುತ್ತೇನೆ, ಭ್ರಷ್ಟಾಚಾರ ಮುಕ್ತ ರಾಷ್ಟ್ರಕ್ಕಾಗಿ ತಮ್ಮ ಅಭಿಯಾನದಲ್ಲಿ ಸೇರಬೇಕೆಂದು ಅಣ್ಣ ಹಜಾರೆ ಜನರಲ್ಲಿ ಮನವ  ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಜಾರೆ ಪಿಟಿಐ ಗೆ ತಿಳಿಸಿದ್ದಾರೆ.
ಈ ಮುನ್ನ ಎನ್ ಡಿಎ ಸರ್ಕಾರ ಲೋಕಪಾಲ್ ಮಸೂದೆ ಜಾರಿ ಮಾಡುವುದಾಗಿಯೂ, ಕೇಂದ್ರದಲ್ಲಿ ಲೋಕಪಾಲರ ನೇಮಕ ಮಾಡುವುದಾಗಿಯೂ ಭರವಸೆ ನೀಡಿತ್ತು ಆದರೆ 2014ರಲ್ಲಿ ಇಂದಿನ ರಾಷ್ಟ್ರಪತಿಗಳು ಲೋಕಪಾಲ್ ವಿಧೇಯಕಕ್ಕೆ ಸಹಿ ಹಾಕಿದ್ದರು. ಆದರೆ ಇದು ಇನ್ನೂ ಕೂಡ  ಜಾರಿಯಾಗಿಲ್ಲ  “ಭ್ರಷ್ಟಾಚಾರವನ್ನು ಹೊಡೆದು ಹಾಕಲು ಸರ್ಕಾರಕ್ಕೆ ಇಚ್ಚೆ ಇದ್ದಂತಿಲ್ಲ. ಆದ್ದರಿಂದ ಇದು ಲೋಕಪಾಲ್ ನೇಮಕ ವಿಳಂಬಕ್ಕೆ ಕಾರಣಗಳನ್ನು ಹೇಳುತ್ತಾ ಬಂದಿದೆ.”  ಎಂದು ಅಣ್ಣಾ ಹಜಾರೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

2 thoughts on “ಲೋಕಪಾಲ ನೇಮಕ ವಿಳಂಬವಾದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ : ಅಣ್ಣಾ ಹಜಾರೆ

Leave a Reply

Your email address will not be published.

Social Media Auto Publish Powered By : XYZScripts.com