ಇಂಗ್ಲೆಂಡ್ ನೆಲದಲ್ಲಿ ರನ್ ಗಳಿಸಬಲ್ಲೆ ಎಂದು ತೋರಿಸಲು ಕೊಹ್ಲಿಗೆ ಇದು ಸೂಕ್ತ ಸಮಯ : ಗ್ಲೆನ್ ಮೆಕ್ ಗ್ರಾ

‘ ಇಂಗ್ಲೆಂಡ್ ನೆಲದಲ್ಲಿಯೂ ರನ್ ಗಳಿಸಬಲ್ಲೆ ಎಂಬುದನ್ನು ತೋರಿಸಲು ವಿರಾಟ್ ಕೊಹ್ಲಿಗೆ ಇದು ಸೂಕ್ತ ಸಮಯವಾಗಿದೆ ‘ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್ ಗ್ರಾ ಹೇಳಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ  ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮೆಕ್ ಗ್ರಾ, ಕೊಹ್ಲಿ ಬ್ಯಾಟಿಂಗ್ ಕುರಿತು ಹೀಗೆ ಹೇಳಿದ್ದಾರೆ. ‘ ವಿರಾಟ್ ಇಂಗ್ಲೆಂಡ್ ಹೊರತು ಪಡಿಸಿ ಬೇರೆ ಎಲ್ಲೆಡೆಯೂ ಉತ್ತಮ ಪ್ರದರ್ಶನ ತೋರಿ ರನ್ ಗಳಿಸಿದ್ದಾರೆ. ಈ ಅಂಶವನ್ನು ಬದಲಾಯಿಸಲು ಕೊಹ್ಲಿ ಕಾತರರಾಗಿರಬಹುದು. ಕೊಹ್ಲಿ ಒಬ್ಬ ಕ್ಲಾಸ್ ಬ್ಯಾಟ್ಸಮನ್ ಹಾಗೂ ಎಲ್ಲ ಹೊಡೆತಗಳೂ ಅವರ ಬತ್ತಳಿಕೆಯಲ್ಲಿವೆ. ಮೈದಾನದಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಲು ಬಯಸುವ ಹಾಗೂ ನಿರ್ಭೀತ ವ್ಯಕ್ತಿತ್ವವನ್ನು ವಿರಾಟ್ ಹೊಂದಿದ್ದಾರೆ.

Related image

‘ ಕೊಹ್ಲಿ ಒಮ್ಮೆ ಬ್ಯಾಟಿಂಗ್ ಲಯ ಕಂಡುಕೊಂಡರೆ, ತುಂಬಾ ಅದ್ಭುತವಾಗಿ ಆಡುತ್ತಾರೆ. ಇಂಗ್ಲೆಂಡ್ ನೆಲದಲ್ಲಿಯೂ ರನ್ ಗಳಿಸಬಲ್ಲೆ ಎಂಬುದನ್ನು ತೋರಿಸಲು ವಿರಾಟ್ ಕೊಹ್ಲಿಗೆ ಇದು ಸೂಕ್ತ ಸಮಯವಾಗಿದೆ ‘ ಎಂದು ಮೆಕ್ ಗ್ರಾ ಹೇಳಿದ್ದಾರೆ.

2014ರ ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. 5 ಟೆಸ್ಟ್ ಪಂದ್ಯಗಳಲ್ಲಿ 10 ಇನ್ನಿಂಗ್ಸ್ ಗಳನ್ನಾಡಿದ್ದ ಕೊಹ್ಲಿ, 13.50 ಸರಾಸರಿಯಲ್ಲಿ 134 ರನ್ ಗಳಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com