ಮಹಾಮಾರಿ ರೇಬಿಸ್ ರೋಗದಿಂದ ಸಾವಿನ ಸಂಖ್ಯೆ ಏರಿಕೆ : ಕರ್ನಾಟಕಕ್ಕೆ 2ನೇ ಸ್ಥಾನ…!

ಬೆಂಗಳೂರು : ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹರಡುವ ರೇಬಿಸ್ ಸೋಂಕು ಮಾರಣಾಂತಿಕವಾಗಿದ್ದು, ರಾಜ್ಯ ಸರ್ಕಾರ ಬೀದಿನಾಯಿಗಳಿಗೆ ಅತ್ಯುತ್ತಮ ರೇಬಿಸ್ ಲಸಿಕೆಗಳನ್ನು ಹಾಕುತ್ತಿದ್ದರೂ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಮಾತ್ರ ಏರುತ್ತಲೇ ಇದ್ದು, ಕರ್ನಾಟಕದಲ್ಲಿಯೇ ಹೆಚ್ಚು ಸಾವು ನೋವುಗಳು ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಆರೋಗ್ಯ ಪ್ರೊಫೈಲ್ 2018 ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರಲ್ಲಿರುವ ಮಾಹಿತಿಗಳ ಪ್ರಕಾರ ದೇಶದಲ್ಲಿಯೇ ರೇಬಿಸ್’ಗೆ ತುತ್ತಾಗಿರುವವರ ಸಂಖ್ಯೆ ಕರ್ನಾಟಕದಲ್ಲಿಯೇ ಹೆಚ್ಚು ಎಂಬುದಾಗಿ ತಿಳಿದುಬಂದಿದೆ. ರೇಬಿಸ್ ರೋಗಕ್ಕೆ ಸಂಬಂಧಿಸಿದ ಸಾವುಗಳಲ್ಲಿ ಕರ್ನಾಟಕ ರಾಜ್ಯ 2ನೇ ಸ್ಥಾನವನ್ನು ಪಡೆದುಕೊಂಡಿದೆ.  ಕಳೆದ ವರ್ಷ ರಾಜ್ಯದಲ್ಲಿ 97 ಮಂದಿಯಲ್ಲಿ ರೇಬೀಸ್ ಕಾಣಿಸಿಕೊಂಡಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. 2016ರಲ್ಲಿ 22 ಪ್ರಕರಣಗಳು ದಾಖಲಾಗಿವೆ. 2012ನೇ ಸಮೀಕ್ಷೆ ಗಳ ಪ್ರಕಾರ ಸಿಲಿಕಾನ್ ಸಿಟಿಯಲ್ಲಿ 2.9 ಲಕ್ಷ ನಾಯಿಗಳಿದ್ದು, ಇದರಲ್ಲಿ 1.05 ಲಕ್ಷ ಸಾಕು ನಾಯಿಗಳಾಗಿದ್ದಾರೆ, 1.85 ಲಕ್ಷ ಬೀದಿ ನಾಯಿಗಳಿವೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಪ್ರಾಣಿ ಪಶು ಇಲಾಖೆ ಪ್ರತಿಕ್ರಿಯೆ ನೀಡಿದ ಪ್ರಕಾರ, ಕಳೆದ ವರ್ಷ 1.7 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದವು. ಸಾಕು ನಾಯಿ ಹಾಗೂ ಬೀದಿನಾಯಿಗಳಿಗೆ ಕ್ರಿಮಿನಾಶಕ ಹಾಗೂ ಲಸಿಕೆಗಳನ್ನು ಹಾಕಲು ಬಿಬಿಎಂಪಿ ರೂ.3 ಕೋಟಿ ಖರ್ಚು ಮಾಡುತ್ತಿದೆ.  2017ನೇ ಸಾಲಿನಲ್ಲಿ 35,266 ನಾಯಿಗಳಿಗೆ ಲಸಿಕೆಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com