ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಯತ್ನಿಸಿ : ಪ್ರತ್ಯೇಕ ರಾಜ್ಯ ವಿಚಾರಕ್ಕೆ ಸುಭುದೇಂದ್ರ ಶ್ರೀ ಪ್ರತಿಕ್ರಿಯೆ

ರಾಯಚೂರು : ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ, ಅಖಂಡತೆಯಲ್ಲೇ ಯಶಸ್ಸು ಸಾಧ್ಯವೆಂದು ರಾಯಚೂರಿನಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರ ಹೇಳಿಕೆ ನೀಡಿದ್ದಾರೆ.

ಸಮಗ್ರ ಕರ್ನಾಟಕ ನಮ್ಮ ಕನಸು, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಯತ್ನಿಸಬೇಕು, ಕರ್ನಾಟಕದ ಎಲ್ಲ ಭಾಗಗಳೂ ಸಮನಾಗಿ ಅಭಿವೃದ್ಧಿ ಕಾಣಬೇಕು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಸರಿಯಲ್ಲ ಎಂದು ಮಂತ್ರಾಲಯ ಶ್ರೀ ಸುಭುದೇಂದ್ರ ಸ್ವಾಮಿಜಿ ತಿಳಿಸಿದ್ದಾರೆ.

ಇನ್ನ ಶಿರೂರು ಮಠದ ವಿವಾದಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯಿಸಿದ ಶ್ರೀ ಸುಭುದೇಂದ್ರ ಸ್ವಾಮಿಜಿ,  ಶಿರೂರು ಮಠಕ್ಕೆ ಸಂಬಂಧಿಸಿ ಪ್ರಕರಣ ತನಿಖಾ ಹಂತದಲ್ಲಿದೆ, ಹೀಗಾಗಿ ಶಿರೂರು ಮಠದ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ ಆದರೆ ತನಿಖೆಯಿಂದ ವಾಸ್ತವಾಂಶ ಬಯಲಿಗೆ ಬರಲಿದೆ ಎಂದು ಮಂತ್ರಾಲಯ ಶ್ರೀ ಸುಭುದೇಂದ್ರ ಸ್ವಾಮಿಜಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com