ನಡುರಸ್ತೆಯಲ್ಲಿ ಶಾಸಕನನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು : ವಿಡಿಯೋ ಫುಲ್ ವೈರಲ್…!

ಮಂಡ್ಯ : ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಗ್ರಾಮಸ್ಥರ  ತರಾಟೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್.

ಕಿರಗಂದೂರು ಗ್ರಾಮಸ್ಥರಿಂದ ಗ್ರಾಮಕ್ಕೆ ಬರದಂತೆ ಮೈ-ಬೆಂ ಹೆದ್ದಾರಿಯಲ್ಲೇ ಶಾಸಕರ ಕಾರು ತಡೆದು ಗ್ರಾಮಸ್ಥರ ತರಾಟೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಈ ವರ್ತನೆಯಿಂದ  ಶಾಸಕ ರವೀಂದ್ರ ಕಕ್ಕಾಬಿಕ್ಕಿಯಾದರು. ಇದೇ ವೇಳೆ  ಶಾಸಕ ಒಬ್ಬ ಗ್ರಾಮಸ್ಥನ ಮೇಲೆ ತೀವ್ರ ಸಿಟ್ಟಿಗೆದ್ದರು.

ಗ್ರಾಮಸ್ಥರ ತರಾಟೆಯಿಂದ ಉದ್ರಿಕರಾದ ಶಾಸಕ ಪ್ರಶ್ನೆ ಮಾಡಿದ ಮತದಾರನ ಮೇಲೆ ಮ್ಯಾನರ್ಸ್ ಕಲಿ , ಲೋ ನಾನು ರಾಜಕೀಯ ನೋಡಿದ್ದೀನಿ ನಿಮಗೆ ಹೆದರಿ ಹೋಗ್ತಿಲ್ಲ, ನೀನು ನನ್ನ ಅಡ್ಡಗಡ್ಡಿ ಮರ್ಯಾದೆ ತೆಗೆದಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿ ಆ ಸ್ಥಳದಿಂದ ಹೊರಟರು….ಈ ಕ್ಷೇತ್ರದ ಮತದಾರರು ತರಾಟೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com