ಇಂಡೊನೇಷ್ಯಾದಲ್ಲಿ ಪ್ರಬಲ ಭೂಕಂಪ : ಲಾಂಬೊಕ್  ದ್ವೀಪದಲ್ಲಿ 10ಮಂದಿ ಸಾವು….!

ಲಾಂಬೋಕ್ : ಇಂಡೊನೇಷ್ಯಾದ ಲಾಂಬೊಕ್  ದ್ವೀಪ ಪ್ರದೇಶದಲ್ಲಿ ವಾರಾಂತ್ಯ ದಿನವಾದ ಇಂದು 6.4 ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಬಲಮೂಲಗಳಿಂದ ತಿಳಿದುಬಂದಿದೆ.

ಈ ಘಟನೆಯಲ್ಲಿ ಹಲವು ಮನೆಗಳು ಕುಸಿದಿದ್ದು ಎಂದು ಇಂಡೊನೇಷ್ಯಾ  ವಿಪತ್ತು ನಿರ್ವಹಣಾ ತಂಡದ ವಕ್ತಾರ ಸುಟೊಪೊ ಪುರ್ವೊ ನ್ಯೂಗ್ರೋಹೊ  ತಿಳಿಸಿದ್ದರೆ.  ಭೂಕಂಪನದ  ಮಾಹಿತಿಯನ್ನು ಸರಿಯಾಗಿ  ಸಂಗ್ರಹಿಸುತ್ತಿಲ್ಲವಾದ್ದರಿಂದ ಸಾವಿನ ಸಂಖ್ಯೆಯು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

A man inspects the damage from the quake.

ಇಲ್ಲಿ ಆಗಾಗ್ಗೇ ಭೂಕಂಪ ಸಂಭವಿಸುತ್ತಲೇ ಇರುತ್ತದೆ. ಕೆಲವೊಂದು ವೇಳೆಯಲ್ಲಿ ಈ  ಪ್ರದೇಶದಲ್ಲಿ ಸುನಾಮಿಯ ಮುಂಜಾಗ್ರತೆಯ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ.2004ರಲ್ಲಿ ಸುಮಾತ್ರ ದ್ವೀಪ ಪ್ರದೇಶದಲ್ಲಿ  9.3 ರಷ್ಟು ತೀವ್ರತೆಯ ಭೂಕಂಪನದಿಂದಾಗಿ ಸುನಾಮಿ ಅಪ್ಪಳಿಸಿತ್ತು. ಇದರಿಂದಾಗಿ  ಇಂಡೊನೇಷ್ಯಾದ  1 , 68 000ಮಂದಿ ಸೇರಿದಂತೆ ಹಿಂದೂ ಮಹಾಸಾಗರದಲ್ಲಿ  2 ಲಕ್ಷದ 20 ಸಾವಿರ ಜನರು ಮೃತಪಟ್ಟಿದ್ದರು.

Leave a Reply

Your email address will not be published.