ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ : ಹುಬ್ಬಳ್ಳಿಯಲ್ಲಿ ಮುಂದುವರೆದ ಎಸ್ಐಟಿ ತನಿಖೆ

ಹುಬ್ಬಳ್ಳಿ: ಸಾಹಿತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ SIT ಅಧಿಕಾರಿಗಳ ತನಿಖೆ ಮುಂದುವರಿಸಿದ್ದರೆ.

ಅಮಿತ್ ಬದ್ದಿಯವರ ಮನೆಗೆ ಬಂದು‌ ವಿಚಾರಣೆ ಮಾಡಿದ SIT ಅಧಿಕಾರಿಗಳು. ಮನೆಯಲ್ಲಿ ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ ಕಾರ್ಡ್ ಪ್ರತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  ಹಲವು ವಿಚಾರಗಳ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು. ಹುಬ್ಬಳ್ಳಿಯ ಗಣೇಶ ಮಿಸ್ಕಿನ್ ಹಾಗೂ ಅಮಿತ್ ಬದ್ದಿ SIT ವಶದಲ್ಲಿದ್ದಾರೆ.

ನಿನ್ನೆಯಿಂದಲೇ SIT ಅಧಿಕಾರಿಗಳು ಗಣೇಶ ಮಿಸ್ಕಿನ್ ಹಾಗೂ ಅಮಿತ್ ಬದ್ದಿ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು, ಇಂದು ಮುಂಜಾನೆ ಅಮಿತ್ ಬದ್ದಿಯವರ ಮನೆಗೆ ತೆರಳಿ ವಿಚಾರಣೆ ನಡೆಸಿದ್ದು ಇನ್ನೂ ಹಲವೇಡೆ SIT ಅಧಿಕಾರಿಗಳು ತನಿಖೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಎಸ್ ಐ ಟಿ ಇನ್ಸ್ ಪೆಕ್ಟರ್ ವೀರೇಂದ್ರ ಪೂಜಾರ ನೇತೃತ್ವದಲ್ಲಿ ಮುಂದುವರಿದ ತನಿಖೆ.

One thought on “ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ : ಹುಬ್ಬಳ್ಳಿಯಲ್ಲಿ ಮುಂದುವರೆದ ಎಸ್ಐಟಿ ತನಿಖೆ

Leave a Reply

Your email address will not be published.

Social Media Auto Publish Powered By : XYZScripts.com