‘ನಮ್ಮ ಉತ್ತರ ಕರ್ನಾಟಕವನ್ನು ಒಡೆಯುವುದಕ್ಕೆ ನಾವು ಬಿಡುವುದಿಲ್ಲ’ : ಶೋಭಾ ಕರಂದಲ್ಲಾಜೆ

ಹುಬ್ಬಳ್ಳಿ : ಯಾವುದೇ ಒಂದು ರೀತಿಯಿಂದ ನಮ್ಮ ಉತ್ತರ ಕರ್ನಾಟಕವನ್ನು ಒಡೆಯುವುದಕ್ಕೆ ನಾವು ಬಿಡುವುದಿಲ್ಲ, ನಮ್ಮ ಭಾರತೀಯ ಜನತಾ ಪಾರ್ಟಿ ಯಡಿಯೂರಪ್ಪನವರ ನೇತ್ರತ್ವದಲ್ಲಿ ಹೋರಾಟ ಮಾಡುತ್ತೇವೆ ಎಂದು ಸಂಸದೆ ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕನ್ನಡ ಕಟ್ಟುವುದಕ್ಕೆ ನಮ್ಮ ಪೂರ್ವಜರ 70 ವರ್ಷಗಳಿಂದ ಶ್ರಮಪಟ್ಟಿದ್ದಾರೆ. ನಮ್ಮ ಭಾರತೀಯ ಜನತಾ ಪಾರ್ಟಿ ಯಡಿಯೂರಪ್ಪನವರ ನೇತ್ರತ್ವದಲ್ಲಿ ಹೋರಾಟ ಮಾಡುತ್ತೇವೆ. ಯಾವುದೇ ಒಂದು ರೀತಿಯಿಂದ ನಮ್ಮ ಉತ್ತರ ಕರ್ನಾಟಕವನ್ನು ಒಡೆಯುವುದಕ್ಕೆ ನಾವು ಬಿಡುವುದಿಲ್ಲ.

ಸಿಎಂ ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆಷ್ಟೇ ಆಧ್ಯತೆ ನೀಡಿದ್ದಾರೆ. ಕುಮಾರಸ್ವಾಮಿ ಕೇವಲ 32 ಕ್ಷೇತ್ರಗಳಿಗೆ ಮುಖ್ಯಮಂತ್ರಿಯಲ್ಲ, ರಾಜ್ಯದ 224 ಕ್ಷೇತ್ರಗಳಿಗೂ ಅವರು ಸಿಎಂ.  ಕಳೆದ ಕಾಂಗ್ರೆಸ್ ನೇತೃತ್ವದ ಸರ್ಕಾರ ಧರ್ಮವನ್ನು ಒಡೆಯುವ ಕೆಲಸ ಮಾಡಿತು,  ಈಗಿನ ಸಿಎಂ ಕುಮಾರಸ್ವಾಮಿ ನಮ್ಮ ನಾಡು ಒಡೆಯು ಕೆಲಸ ಮಾಡುತ್ತಿದ್ದಾರೆ.  ಎಂದು ಸಿಎಂ ಕುಮಾರಸ್ವಮಿ ವಿರುದ್ದ ಬಿಜೆಪಿ ಸಂಸದೆ ಶೋಭಾ ಕರಂದಲ್ಲಾಜೆ ಕಿಡಿಕಾರಿದ್ದರು.

 

 

Leave a Reply

Your email address will not be published.