ಜುಲೈ 29 ರಂದು ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಸ್ಮರಣಾರ್ಥ ‘ಗುರುವಂದನಾ’ ಕಾರ್ಯಕ್ರಮ..

ಬೆಂಗಳೂರಿನ ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯದ ವತಿಯಿಂದ ಖ್ಯಾತ ಬಾನ್ಸುರಿ ವಾದಕ ದಿವಂಗತ ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರ ಸ್ಮರಣಾರ್ಥ ಜುಲೈ 29 ರಂದು ಭಾನುವಾರ ‘ಗುರುವಂದನಾ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ.

ಜಯನಗರ 7ನೇ ಬ್ಲಾಕ್ ನಲ್ಲಿರುವ ಜೆ ಎಸ್ ಎಸ್ ಶಿವರಾತ್ರೀಶ್ವರ ಸಭಾಂಗಣದಲ್ಲಿ ಸಾಯಂಕಾಲ 4.30 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯದ ಶಿಷ್ಯ ಬಳಗದವರಿಂದ ಗಾಯನ, ಬಾನ್ಸುರಿ ಹಾಗೂ ತಬಲಾ ವಾದನ ಕಾರ್ಯಕ್ರಮ ನಡೆಯಲಿದೆ.

Image result for sanjog bansuri

ಮೊಟ್ಟ ಮೊದಲ ಬಾರಿಗೆ ಎರಡು ಪ್ರಖ್ಯಾತ ಸಂಗೀತ ಮನೆತನಗಳ ಅಪರೂಪದ ವೈಯೋಲಿನ್ – ಬಾನ್ಸುರಿ ವಾದ್ಯಗಳ ಜುಗಲ್ ಬಂದಿ ಕಾರ್ಯಕ್ರಮ ಜರುಗಲಿದೆ. ವಿದ್ವಾನ್ ಮೈಸೂರು ಮಂಜುನಾಥ್ ಹಾಗೂ ಅವರ ಪುತ್ರ ಮಾಸ್ಟರ್ ಸುಮಂತ್ ಮಂಜುನಾಥ್ ವೈಯೋಲಿನ್ ನುಡಿಸಿದರೆ, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಹಾಗೂ ಮಾಸ್ಟರ್ ಷಡಜ್ ಗೋಡ್ಖಿಂಡಿ ಬಾನ್ಸುರಿ ನಾದದ ಝರಿ ಹರಿಸಲಿದ್ದಾರೆ.

ಈ ಜುಗಲ್ ಬಂದಿ ಕಾರ್ಯಕ್ರಮಕ್ಕೆ ಖ್ಯಾತ ಪಕ್ಕವಾದ್ಯ ಕಲಾವಿದ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮಾ ಮೃದಂಗದಲ್ಲಿ ಮತ್ತು ಪಂಡಿತ್ ಕಿರಣ್ ಗೋಡ್ಖಿಂಡಿ ತಬಲಾ ಸಾಥ್ ನೀಡಲಿದ್ದಾರೆ.

Image result for sanjog bansuri

2002 ರಲ್ಲಿ ವಿಶ್ವವಿಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಅವರಿಂದ ಉದ್ಘಾಟಿಸಲ್ಪಟ್ಟ ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯ ಹಲವು ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಬಾನ್ಸುರಿ ಹಾಗೂ ತಬಲಾ ವಾದನದ ತರಬೇತಿ ನೀಡುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com