ಮೈಸೂರು : ಗ್ರಹಣದ ವೇಳೆ ಹೊರಗೆ ಬಾರದ ಜನ : ಅಂಗಡಿಗಳಿಗೆ ಕನ್ನ ಹಾಕಿ ಲಕ್ಷಾಂತರ ದೋಚಿದ ಕಳ್ಳರು..!

ಶುಕ್ರವಾರ ರಾತ್ರಿ ಸಂಭವಿಸಿದ ಚಂದ್ರ ಗ್ರಹಣ ಕಾಲದಲ್ಲಿ ಕಳ್ಳರು ಕೈಚ‌ಳಕ ತೋರಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಗ್ರಹಣ ಕಾಲದಲ್ಲಿ ಹೊರಕ್ಕೆ ಬಾರದಿರುವುದನ್ನೇ  ಸಲುಗೆ ಮಾಡಿಕೊಂಡ ಕಳ್ಳರು 8 ಅಂಗಡಿಗಳಿಗೆ ಕನ್ನ ಕೊರೆದಿರುವ ಘಟನೆ ನಡೆದಿದೆ. ಮೈಸೂರಿನ ಕನಕದಾಸ ನಗರದ ನೇತಾಜಿ ವೃತ್ತದ ಬಳಿ ಇರುವ ಅಂಗಡಿಗಳನ್ನ ದೋಚಿದ್ದಾರೆ.

ಮೆಡಿಕಲ್‌ ಸ್ಟೋರ್, ಸ್ಟೇಷನರಿ, ಪ್ರಾವಿಷನ್ ಸ್ಟೋರ್ ಗಳ‌ ಕಳ್ಳತನವಾಗಿದ್ದು, ಅಂಗಡಿಗಳ ರೋಲಿಂಗ್ ಶೆಟರ್ ಗಳನ್ನು ಮೀಟಿ ಭಾರೀ ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಶೆಟರ್ ಗಳನ್ನು ಮೀಟಿ ತೆರೆಯಲು ಹೈಡ್ರಾಲಿಕ್ ಜಾಕ್ ಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಕುವೆಂಪು ನಗರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com