ರಾಮನಗರ : ಜಮೀನಿನ ವಿಚಾರಕ್ಕೆ ಹೆತ್ತ ತಾಯಿಯನ್ನೇ ಕೊಂದ ನೀಚ ಪುತ್ರ…!
ರಾಮನಗರ : ಹೆತ್ತ ತಾಯಿಯಂತಲು ನೋಡದೇ ಆಸ್ತಿಗಾಗಿ ಮಗನೇ ಅಮ್ಮನನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ರಾಮನಗರದ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ನಡೆದಿದೆ.
70ವರ್ಷದ ನಾಗಮ್ಮ ಮೃತ ವೃದ್ದೆ. ಆರೋಪಿ ಸುರೇಶ್ ಜಮೀನ ವಿಚಾರವಾಗಿ ತಾಯಿಯನ್ನೇ ಕಳೆದ ಮೂರು ದಿನಗಳ ಹಿಂದೆ ಕೊಲೆ ಮಾಡಿ ಮನೆಯ ಬಾತ್ ರೂಂ ಪಿಟ್ ಒಳಗೆ ಹಾಕಿ ಮುಚ್ಚಿ ಹಾಕಿರುವುದು ತಿಳಿದುಬಂದದ್ದೆ. ಈ ಘಟನೆಗೆ ಸಂಬಂಧ ಎಂ. ಕೆ.ದೊಡ್ಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.