ಪ್ರತ್ಯೇಕ ಕೂಗು ಸರಿಯಲ್ಲ. ಅಖಂಡ ಕರ್ನಾಟಕವೇ ಒಳಿತು : ಸಚಿವ ವೆಂಕಟರಾವ್ ನಾಡಗೌಡ

ರಾಯಚೂರು : ಪ್ರತ್ಯೇಕ ಕೂಗು ಸರಿಯಲ್ಲ. ಅಖಂಡ ಕರ್ನಾಟಕವೇ ಒಳಿತು ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಅಭಿಪ್ರಾಯಪಟ್ಟಿದ್ದಾರೆ.

ರಾಯಚೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ನಾಡಗೌಡರು, ಗಡಿನಾಡು ಬೆಳಗಾವಿಯಲ್ಲಿ ಮೊದಲ ಅಧಿವೇಶನ ಕರೆದದ್ದೆ ಎಚ್.ಡಿ.ಕುಮಾರಸ್ವಾಮಿ ಅವರು. ಇದು ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿಲ್ಲ ಎಂಬುದನ್ನು ಸಾಬೀತು ಮಾಡಿದೆ, ತಿಳುವಳಿಕೆ ಇಲ್ಲದವರು ಮಾತ್ರ ಪ್ರತ್ಯೇಕ ರಾಜ್ಯ ರಚನೆಗೆ ಬೇಡಿಕೆ ಇಡುತ್ತಿದ್ದಾರೆ, ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಅಖಂಡ ಕರ್ನಾಟಕವೇ ಒಳಿತು ಎಂದು ನಾಡಗೌಡರ ತಿಳಿಸಿದ್ದಾರೆ.

ಉತ್ತರ ಕರ್ನಾಟಕಕ್ಕೆ ಕೊಡುಗೆ ಏನು?…ಬಿಜೆಪಿಯವರ ಕೊಡುಗೆ ಏನು?… ಎನ್ನುವುದು ನಾಡಿನ ಜನತೆಗೆ ಗೊತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ, ಯಾವ ರಾಜ್ಯದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಿದೆ ಎಂದು ಅವರು ನಾಡಗೌಡರು ಪ್ರಶ್ನಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com