ಮೈದಾನದಲ್ಲಿನಂತೆಯೇ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಿ : ಇಮ್ರಾನ್ ಖಾನ್‍ಗೆ ಅಜರುದ್ದೀನ್ ಸಲಹೆ

ನೆರೆರಾಷ್ಟ ಪಾಕಿಸ್ತಾನದಲ್ಲಿ ಎರಡು ದಿನಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಆಲ್ರೌಂಡರ್ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಎ-ಇನ್ಸಾಫ್ 122 ಸೀಟುಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿ ಹುದ್ದೆಯ ಪ್ರಬಲ ದಾವೇದಾರ ಎನಿಸಿದ್ದಾರೆ.

ಪಾಕಿಸ್ತಾನದ ಭಾವೀ ಪ್ರಧಾನಿ ಎಂದೇ ಬಿಂಬಿಸಲ್ಪಡುತ್ತಿರುವ ಇಮ್ರಾನ್ ಖಾನ್ ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್ ‘ ಮೈದಾನದಲ್ಲಿ ತೆಗೆದುಕೊಳ್ಳುತ್ತಿದ್ದ ರೀತಿಯಲ್ಲಿಯೇ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಿ ‘ ಎಂದು ಸಲಹೆ ನೀಡಿದ್ದಾರೆ.

ಹೈದರಾಬಾದ್ ನಲ್ಲಿ ಮಾತನಾಡಿರುವ ಅಜರ್ ‘ ಮೈದಾನದಲ್ಲಿ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತುಂಬ ಸಕಾರಾತ್ಮಕ ಹಾಗೂ ನಾಯಕನ ದಿಟ್ಟ ವೈಯಕ್ತಿಕ ನಿರ್ಣಯಗಳಾಗಿರುತ್ತಿದ್ದವು, ಈಗ ಪ್ರಧಾನಿಯಾದ ನಂತರ ಅದೇ ರೀತಿಯಾದಂತಹ ದಿಟ್ಟ ನಿರ್ಧಾರಗಳನ್ನು ರಾಜಕೀಯದಲ್ಲಿ ಕೈಗೊಳ್ಳಲಿ ‘ ಎಂದು ಸಲಹೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com