ಮಂಡ್ಯ : ಅಂತರಾಷ್ಟ್ರೀಯ ಟೆನಿಕಾಯ್ಟ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಗ್ರಾಮೀಣ ಪ್ರತಿಭೆ ಮಿಂಚು!

ಮಂಡ್ಯ : ರೈತನ‌ ಮಗಳಾಗಿ ಬೆಳೆದು ಮಂಡ್ಯ ಜಿಲ್ಲೆಯ ಹೆಮ್ಮೆ ಪಡುವ ಹಾಗೆ  4ನೇ ವಿಶ್ವ ಟೆನಿಕಾಯ್ಟ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಹಂಸವೇಣಿ  ಪ್ರತಿನಿಧಿಸುತ್ತಿದ್ದಾಳೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹಂಸವೇಣಿ ರಷ್ಯಾದ ಒಕ್ಕೂಟದ ಬೆಲಾರಸ್​​ನಲ್ಲಿ ನಡೆಯಲಿರುವ 4ನೇ ವಿಶ್ವ ಟೆನಿಕಾಯ್ಟ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮೆರೆದಿದ್ದಾಳೆ‌.

ಜುಲೈ. 31 ರಿಂದ ಆಗಸ್ಟ್ 9ರವರೆಗೆ ರಷ್ಯಾದ ಬೆಲಾರಷ್ ನಡೆಯಲಿರುವ 4ನೇ ವಿಶ್ವ ಟೆನಿಕಾಯ್ಟ್ ಚಾಂಪಿಯನ್ ಶಿಫ್ ಗೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸುವ ಮೂಲಕ ರಾಜ್ಯದಿಂದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಈ ಮೂಲಕ ಕರ್ನಾಟಕ ಮತ್ತು ತವರು ಜಿಲ್ಲೆಯಾದ ಮಂಡ್ಯದ ಕೀರ್ತಿ ಪತಾಕೆ ಹಾರಿಸಿದ್ದು,  ಬೆಲಾರಸ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಜಯ ಸಾಧಿಸಿ ರಾಷ್ಟ್ರದ ಮತ್ತು ರಾಜ್ಯ ಹಾಗೂ ಸಕ್ಕರೆ ಜಿಲ್ಲೆಯ ಕೀರ್ತಿ ಪತಾಕೆ ಬೆಳಗಿಸುವ ವಿಶ್ವಾಸ ಹೊಂದಿದ್ದಾರೆ.

One thought on “ಮಂಡ್ಯ : ಅಂತರಾಷ್ಟ್ರೀಯ ಟೆನಿಕಾಯ್ಟ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಗ್ರಾಮೀಣ ಪ್ರತಿಭೆ ಮಿಂಚು!

Leave a Reply

Your email address will not be published.

Social Media Auto Publish Powered By : XYZScripts.com