ವೈದ್ಯಕೀಯ ಆಯೋಗ ಬಿಲ್ ವಿರೋಧಿಸಿ ಬಂದ್ : ಖಾಸಗಿ ಆಸ್ಪತ್ರೆಗಳ OPD ಸೇವೆ ಸ್ಥಗಿತ…!

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಬಿಲ್ ವಿರೋಧಿಸಿ ಖಾಸಗಿ ವೈದ್ಯರು ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬಳರೋಗಿಗಳ ತುರ್ತು ಸೇವೆ ಹೊರತು ಪಡಿಸಿ, ಉಳಿದೆಲ್ಲ ಹೊರರೋಗಿಗಳ ಸೇವೆ ಬಂದ್ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಇನ್ನು ಇವರ ಪ್ರತಿಭಟನೆಯಿಂದಾಗಿ ರೋಗಿಗಳಿಗೆ ತೊಂದರೆಯಾಗದಂತೆ ಇತ್ತ ಆರೋಗ್ಯ  ಇಲಾಖೆ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ರಜೆ ಇಲ್ಲದಂತೆ ಕೆಲಸ ನಿರ್ವಹಿಸುವಂತೆ ಆದೇಶ ಹೊರಡಿಸಿದೆ.

ರಾಮನಗರ : ರಾಮನಗರ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಗಳು ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಬಿಲ್ ಪಾಸ್ ವಿರುದ್ಧ ಖಾಸಗಿ ವೈದ್ಯರ ಮುಷ್ಕರ ಕರೆ ನೀಡಿದ್ದು,  ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ಬಂದ್ ನಡೆಯಲಿದೆ ಎನ್ನಲಾಗಿದೆ.  ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಬಿಲ್ ಪಾಸ್ ಮಾಡದಿರಲು ಒತ್ತಾಯಿಸುತ್ತಿದ್ದು,  ಜಿಲ್ಲೆಯಲ್ಲಿ ಒಟ್ಟು 140 ಜನ ಖಾಸಗಿ ವೈದ್ಯರು ಸೇವೆಯನ್ನು  ಸ್ಥಗಿತ ಗೊಳಿಸಿದ್ದು, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದ ಸೇರಿ  160 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಬಂದ್ ನಡೆಸುತ್ತಿದ್ದು,  ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಜನಸಾಮಾನ್ಯರಿಗೆ ಸೇವೆ ನಡೆಯಲಿದೆ ಎಂದು ತಿಳಿದುಬಂದಿದೆ.

ಬಳ್ಳಾರಿ :  ಒಳರೋಗಿಗಳಿಗೆ ಚಿಕಿತ್ಸೆ ‌ನೀಡಲಾಗುವುದು ಆದರೆ  ಒಪಿಡಿ ರೋಗಿಗಳನ್ನು‌ ನೋಡುವುದಿಲ್ಲ, ಬೆಳಗ್ಗೆ 6ರಿಂದ ಸಂಜೆ 6ಗಂಟೆಯವರೆಗೂ ಚಿಕಿತ್ಸೆ ಸ್ಥಗಿತಗೊಳಿಸಲು ರೋಗಿಗಳೂ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದೇವೆ, 11ಗಂಟೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿರುವ ಸಂಘ,  ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಜಾರಿಗೆ ವಿರೋಧ ಇದು ವೈದ್ಯರ ಮೇಲೆ ನಿಯಂತ್ರಣ ಸಾಧಿಸುವ ಕಾಯ್ದೆಯಾಗಿದೆ ಎಂದು ವೈದ್ಯಕೀಯ ಸಂಘದ ಕಾರ್ಯದರ್ಶಿ ರಾಜಶೇಖರ ತಿಳಿಸಿದ್ದರೆ.

 

Leave a Reply

Your email address will not be published.